ಛತ್ತೀಸ್ ಗಡ: ಪ್ರೇಮಿಗಳ ದಿನಾಚರಣೆಗೆ ಹಿಂದೂಪರ ಸಂಘಟನೆಗಳ ವಿರೋಧದ ನಡುವೆಯೇ ಛತ್ತೀಸ್ ಗಡ ಸರ್ಕಾರ ಕೂಡ ವಿರೋಧ ವ್ಯಕ್ತಪಡಿಸಿದೆ.
ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಯನ್ನು ಪೂಜಿಸುವ ಬದಲು ನಿಮ್ಮನ್ನು ಪ್ರೀತಿಸುವ ತಂದೆತಾಯಿಗಳನ್ನು ಪೂಜಿಸಿ ಎಂದು ಛತ್ತೀಸ್ ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ರಮಣ್ ಸಿಂಗ್ ಅವರು, ಪ್ರೇಮಿಗಳ ದಿನಾಚರಣೆಯಂದು ಯಾವುದೇ ವಿಶೇಷ ಆದೇಶ ನೀಡುವುದಿಲ್ಲ. ಆದರೆ ಫೆ. 14ರಂದು ಪಾಲಕರನ್ನು ಶಾಲೆಗೆ ಕರೆಸಿ ಆರತಿ ಬೆಳಗಿ, ಸಿಹಿ ನೀಡಿ ಗೌರವ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕರ್ನಾಟಕದಲ್ಲಿ ಕಳೆದ ವರ್ಷದವರೆಗೂ ಪ್ರೇಮಿಗಳ ದಿನಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಶ್ರೀರಾಮ ಸೇನೆ ಈ ಭಾರಿ ಆ ಬಗ್ಗೆ ಸುದ್ದಿಯೇ ಇಲ್ಲ. ಭಜರಂಗದಳ ಕೂಡ ಯಾವುದೇ ಪ್ರತಿರೋಧ ತೋರಲು ಪ್ರಯತ್ನಿಸಿಲ್ಲ. ಉತ್ತರ ಪ್ರದೇಶದಲ್ಲಿ ಪ್ರೇಮಿಗಳು ಸಿಕ್ಕರೆ ಆರ್ಯ ಸಮಾಜ ಪದ್ಧತಿಯಂತೆ ಮದುವೆ ಮಾಡಲಾಗುವುದು. ಪ್ರೇಮಿಗಳು ಅಂತರ್ ಧರ್ಮೀಯರಾಗಿದ್ದರೆ ಅವರನ್ನು ಶುದ್ಧೀಕರಣಗೊಳಿಸಿ ಮದುವೆ ಮಾಡಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿಡಲಾಗುವುದು ಎಂದು ಹಿಂದೂ ಪರ ಸಂಘಟನೆ ಎಚ್ಚರಿಕೆ ನೀಡಿದೆ.