ದೇಶ

ಮೈಸೂರು ಸೇರಿ ದೇಶದ 2,500 ನಗರಗಳಲ್ಲಿ ವೈಫೈ

ಕರ್ನಾಟಕದ ಮೈಸೂರು ಸೇರಿದಂತೆ ದೇಶದ 2,500 ಪಟ್ಟಣ ಮತ್ತು ನಗರಗಳಲ್ಲಿ ಬಿಎಸ್ಎನ್ಎಲ್ ನಿಂದ...

ನವದೆಹಲಿ: ಕರ್ನಾಟಕದ ಮೈಸೂರು ಸೇರಿದಂತೆ ದೇಶದ 2,500 ಪಟ್ಟಣ ಮತ್ತು ನಗರಗಳಲ್ಲಿ ಬಿಎಸ್ಎನ್ಎಲ್ ನಿಂದ ಶೀಘ್ರದಲ್ಲೇ ವೈಫೈ ಸೌಲಭ್ಯ ಕಲ್ಪಿಸಲಾಗುತ್ತದೆ.

ಪ್ರಧಾನಿ ಮೋದಿಯವರ ಕ್ಷೇತ್ರ ವಾರಾಣಸಿಯ ನ.8ರಂದು ದಶಾಶ್ವಮೇಧ ಘಾಟ್‍ನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಅವರು ಚಾಲನೆ ನೀಡಲಿದ್ದಾರೆ. ವಾರಾಣಸಿ ಬಳಿಕ ಉಳಿದ 2,499 ನಗರಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಬಿಎಸ್ಎನ್ ಎಲ್ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಯೋಜನೆಯಡಿ ಆರಂಭದ ಕೆಲವು ನಿಮಿಷ ಸಾರ್ವಜನಿಕರು ಉಚಿತವಾಗಿ ವೈಪೈಸೌಲಭ್ಯ ಬಳಸಿಕೊಳ್ಳಬಹುದು.

ಆ ಬಳಿಕ ನಿಗದಿಪಡಿಸಿದ ಶುಲ್ಕ ಪಾವತಿಸಬೇಕಾಗುತ್ತದೆ. ಸಾರ್ವಜನಿಕರು ಯಾವುದೇ ಸಿಮ್  ಬಳಸುತ್ತಿದ್ದರೂ ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳ ಮೂಲಕ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು. ದೇಶಾದ್ಯಂತ ವೈಫೈ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮದ ಒಟ್ಟು ಅಂದಾಜು ವೆಚ್ಚ ರು.7 ಸಾವಿರ ಕೋಟಿ. ಯೋಜನೆಯಡಿ ಒಟ್ಟು 60 ಸಾವಿರ ಹಾಟ್ ಸ್ಪಾಟ್ ಗಳನ್ನು ಸೃಷ್ಟಿಸಲಾಗುತ್ತದೆ ಎಂದು ಬಿಎಸ್ಎನ್ಎಲ್ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಪ್ರತಿಕ್ರಿಯೆ ಇಲ್ಲದೆ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಅಂಗೀಕಾರ; ವಿಪಕ್ಷಗಳ ತೀವ್ರ ಗದ್ದಲ, ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಕಲಾಪ ಮುಂದೂಡಿಕೆ

India vs Pakistan T20 World Cup 2026: ಪಂದ್ಯ ಬಹಿಷ್ಕರಿಸುವ​ ನಿರ್ಧಾರ, ನಮ್ಮ ನಿಲುವು ಸ್ಪಷ್ಟ ಎಂದ ಪಾಕ್ ಪ್ರಧಾನಿ

Namma Metro Price Hike: ಪರಿಷ್ಕೃತ ದರ ಪ್ರಕಟ, ಫೆಬ್ರವರಿ.9 ರಿಂದ ಹೊಸ ದರ ಜಾರಿಗೆ..!

'ನಾನು ಜೀವನದ ಸಂಧ್ಯಾಕಾಲದಲ್ಲಿದ್ದೇನೆ: ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ; ಕರ್ನಾಟಕವನ್ನು ರಕ್ಷಿಸಿ'

ಶಶಿ ತರೂರ್ ಪುತ್ರ ಸೇರಿ 500 ಮಂದಿ ಕಿತ್ತೊಗೆದ ವಾಷಿಂಗ್ಟನ್ ಪೋಸ್ಟ್: 'ನನ್ನ ಹೃದಯ ಒಡೆದಿದೆ' ಎಂದ ಇಶಾನ್!

SCROLL FOR NEXT