ದೇಶ

ಶಿಷ್ಟಾಚಾರ ಪಾಲನೆ ಬಾರದ ರೋಸಯ್ಯ!

Mainashree

ಗುಂಟೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆದರಿ ಆಂಧ್ರದ ಗುಂಟೂರಿನಲ್ಲಿ ನಡೆಯಬೇಕಿದ್ದ ಮಹಾತ್ಮಾಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಿಂದ ತಮಿಳುನಾಡಿನ ರಾಜ್ಯಪಾಲ ಕೆ.ರೋಸಯ್ಯ ಅವರು ದೂರ ಉಳಿದ ಪ್ರಸಂಗ ನಡೆದಿದೆ.

ರೋಸಯ್ಯ ಅಭಿಮಾನಿಯೂ ಆದ ಗುಂಟೂರಿನ ಸ್ಥಳೀಯ ಉದ್ಯಮಿಯೊಬ್ಬರು ಶನಿವಾರ ಮಹಾತ್ಮಾಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಈ ಪ್ರತಿಮೆಯ ಅನಾವರಣಕ್ಕೆ ರೋಸಯ್ಯ ಅವರನ್ನು ಆಹ್ವಾನಿಸಿದ್ದರು. ಆರು ತಿಂಗಳ ಹಿಂದೆಯೇ ರೋಸಯ್ಯ ಒಪ್ಪಿಗೆ ಪಡೆದು ಆಮಂತ್ರಣ ಪತ್ರವನ್ನೂ ಮುದ್ರಿಸಿದ್ದರು. ಆದರೆ, ಇವರು ಮಾಡಿದ ತಪ್ಪೇನೆಂದರೆ, ಆಮಂತ್ರಣ ಪತ್ರದಲ್ಲಿ ಗಾಂಧೀಜಿ, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪಕ್ಷದ ಇತರೆ ಮುಖಂಡರ ಸಣ್ಣ ಪೋಟೋ ಹಾಕಿದ್ದರು.

ಆದರೆ, ರೋಸಯ್ಯ ಮತ್ತು ಸ್ಥಳೀಯ ಟಿಡಿಪಿ ಮುಖಂಡರ ದೊಡ್ಡ ಫೋಟೊ ಮುದ್ರಿಸಿದ್ದರು. ಈ ಆಮಂತ್ರಣ ಪತ್ರಕ್ಕೆ ಸ್ಥಳೀಯ ಬಿಜೆಪಿ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಾಗಾಗಿ ಇದನ್ನು ಶಿಷ್ಟಾಚಾರ ಉಲ್ಲಂಘನೆಯೆಂದು ಪರಿಗಣಿಸಿ ರಾಜಭವನ ಅಧಿಕಾರಿಗಳು ರೋಸಯ್ಯ ಅವರಿಗೆ ಕಾರ್ಯಕ್ರಮ ರದ್ದು ಮಾಡುವಂತೆ ಸೂಚಿಸಿದ್ದರು.

ಆದರೆ, ಇದು ಖಾಸಗಿ ಕಾರ್ಯಕ್ರಮ. ಹಾಗಾಗಿ ಇಲ್ಲಿ ಶಿಷ್ಟಾಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಿದ್ದರೆ ರೋಸಯ್ಯ ಕಾರ್ಯಕ್ರಮ ರದ್ದು ಮಾಡಿದ್ದು ಯಾಕೆ? ಮೋದಿಗೆ ಹೆದರಿ. ಹೌದು, ರೋಸಯ್ಯ ಯುಪಿಎ ಅವಧಿಯಲ್ಲಿ ನೇಮಕಗೊಂಡ ಹಾಗೂ ಬಿಜೆಪಿ ಅವಧಿಯಲ್ಲಿ ಅಧಿಕಾರದಲ್ಲಿರುವ ಕೆಲವೇ ರಾಜ್ಯಪಾಲರಲ್ಲಿ ಒಬ್ಬರು.    

SCROLL FOR NEXT