ದೇಶ

54 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಮಾನದ ಅವಶೇಷ ಪತ್ತೆ

Mainashree

ಚಿಲೆ: ಕಳೆದ 54 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಮಾನದ ಅವಶೇಷಗಳನ್ನು ಪರ್ವಾತಾರೋಹಿ ಯುವಕರ ತಂಡ ಪತ್ತೆ ಹಚ್ಚಿದ್ದಾರೆ.

54 ವರ್ಷಗಳ ಹಿಂದೆ ಫುಟ್‌ಬಾಲ್ ಆಟಗಾರರೂ ಸೇರಿದಂತೆ 24 ಮಂದಿ ಇದ್ದ ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು. 1931 ಏಪ್ರಿಲ್ 03ರಂದು ಚಿಲ್ಲಿ ದೇಶದ ಗ್ರೀನ್‌ಕ್ರಾಸ್ ತಂಡದ ಫುಟ್‌ಬಾಲ್ ಆಟಗಾರರು ಇದರಲ್ಲಿ ಪ್ರಯಾಣಿಸುತ್ತಿದ್ದರು. ಅಂದಿನಿಂದ ವಿಮಾನದ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಇದೀಗ ಪರ್ವಾತಾರೋಹಿ ಯುವಕರು ನಾಪತ್ತೆಯಾಗಿದ್ದ ವಿಮಾನದ ಅವಶೇಷಗಳನ್ನು ಪತ್ತೆಹಚ್ಚಿರುವುದಾಗಿ ಎಂದು ಹೇಳಿಕೊಂಡಿದ್ದಾರೆ.

ಚಿಲ್ಲಿಯ ಚಾನಲ್-7 ಸುದ್ದಿ ಮಾಧ್ಯಮ ಈ ಸುದ್ದಿಯನ್ನು ಪ್ರಕಟಿಸಿದ್ದು, ಆದರೆ, ಅವಶೇಷಗಳು ಎಲ್ಲಿ ಸಿಕ್ಕಿವೆ ಎಂಬ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಕೆಲವು ಲೂಟಿಕೋರರು ಅಲ್ಲಿಗೆ ತೆರಳಿ ವಸ್ತುಗಳನ್ನು ದೋಚಬಹುದು ಎಂಬ ಸಂಶಯದಿಂದ  ಇದನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಸ್ಯಾಂಟಿಯಾಗೊದ ದಕ್ಷಿಣಕ್ಕೆ 205 ಮೈಲಿ ದೂರದಲ್ಲಿ ನಾಪತ್ತೆಯಾಗಿದ್ದ ಡೌಗ್ಲಾಸ್ ಡಿಸಿ-3 ವಿಮಾನದ ಪತನಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.


SCROLL FOR NEXT