ದೇಶ

ಪರಾರಿಯಾಗಲು ಯತ್ನಿಸಿ ವಿಫಲವಾದ 6 ಖೈದಿಗಳು ಆತ್ಮಹತ್ಯೆ

ಜೈಲಿನಿಂದ ಪರಾರಿಯಾಗಲು ಯತ್ನಿಸಿ ವಿಫಲವಾದ 6 ಖೈದಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...

ತೈಪೈ(ತೈವಾನ್): ಜೈಲಿನಿಂದ ಪರಾರಿಯಾಗಲು ಯತ್ನಿಸಿ ವಿಫಲವಾದ 6 ಖೈದಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾವೋಹ್ಲುಂಗ್‌ನಲ್ಲಿ ಗುರುವಾರ ನಡೆದಿದೆ.

ತಾವು ಮಾಡಿದ ತಪ್ಪಿಗೆ ಜೀವಮಾನ ಸೆರೆವಾಸ ಶಿಕ್ಷೆ ನೀಡಿರುವುದು ಅಪ್ರಮಾಣಿಕವಾದುದು ಎಂದು ಆರೋಪ ವ್ಯಕ್ತಪಡಿಸಿದ್ದ 6 ಖೈದಿಗಳು ಬುಧವಾರ ನಿನ್ನೆ ಜೈಲಿನಲ್ಲಿದ್ದ ಸುಮಾರು 5 ಮಂದಿ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡು ತಮ್ಮನ್ನು ಬಿಡುಗಡೆ ಮಾಡುವಂತೆ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಇದಕ್ಕೆ ಒಪ್ಪದ ಸರ್ಕಾರ ಅವರಿಗೆ ಮನವರಿಕೆ ಮಾಡಲು ಯತ್ನಿಸಿತ್ತು ಇದಕ್ಕೆ ಒಪ್ಪದ ಖೈದಿಗಳು ಒಪ್ಪಿಗೆ ನೀಡಿರಲಿಲ್ಲ.

ನಂತರ ಕಾರ್ಯಾಚರಣೆಗೆ ಮುಂದಾದ ಸರ್ಕಾರ ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಖೈದಿಗಳ ಬಳಿ ಇದ್ದ ಶಸ್ತ್ರಾಸ್ತಗಳನ್ನು ವಶಪಡಿಸಿಕೊಂಡು ಒತ್ತೆಯಾಳಾಗಿದ್ದ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿ, ಖೈದಿಗಳನ್ನು ಸೆರೆಮನೆಯಲ್ಲಿರಿಸಲಾಗಿತ್ತು. ತಮ್ಮ ಒತ್ತಾಸೆ ಈಡೇರದ ಕಾರಣ ನೊಂದ ಖೈದಿಗಳು ತಾವು ಅವತಿಟ್ಟಿದ್ದ ಒಂದು ಪಿಸ್ತೂಲಿಂದ ಒಬ್ಬರಿಗೊಬ್ಬರು ಗುಂಡು ಹೊಡೆದುಕೊಂಡು ಇಂದು ಮುಂಜಾನೆ ಆತ್ಮಹತ್ಯೆ ಕೈಗೊಂಡಿದ್ದಾರೆ.

ಸಿಬ್ಬಂದಿಗಳನ್ನು ಒತ್ತೆಗಳನ್ನಾಗಿರಿಸಿಕೊಂಡಿದ್ದ ಸಂದರ್ಭದಲ್ಲಿ ಪತ್ರಿಕೆಯೊಂದರ ಜೊತೆ ಮೊಬೈಲ್ ಮೂಲಕ ಮಾತನಾಡಿದ್ದ ಅಲ್ಲಿನ ಖೈದಿಗಳು, ಈ ಕುರಿತಂತೆ ನಾವು ಹಲವು ದಿನಗಳಿಂದ ಯೋಜನೆ ರೂಪಿಸುತ್ತಿದ್ದೆವು. ನಾವು ತಪ್ಪು ಮಾಡಿದ್ದೇವೆ ಆದರೆ ಜೀವಮಾನ ಸೆರೆಮನೆ ವಾಸದ ಶಿಕ್ಷೆ ಅಪ್ರಾಮಾಣಿಕವಾದದ್ದು ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ನೇಪಾಳದಲ್ಲಿ ಭೀಕರ ಪ್ರವಾಹ: ಬಿಹಾರ, ಉತ್ತರ ಪ್ರದೇಶದಲ್ಲಿ NDRF ಹೈ ಅಲರ್ಟ್; ನದಿ ಪಾತ್ರದಲ್ಲಿ ಕಟ್ಟೆಚ್ಚರ

ನಿನ್ನ ತಲೆ ಕಡಿತೀವಿ: ಈದ್ ಮೆರವಣಿಗೆ ವೇಳೆ ಪುನೀತ್ ಕೆರೆಹಳ್ಳಿ ವಿರುದ್ಧ ಘೋಷಣೆ; ಹಿಂದೂ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!