ದೇಶ

ಇಸಿಸ್‍ಗಿಂತಲೂ ಅಪಾಯಕಾರಿ ಭಯೋತ್ಪಾದನಾ ಸಂಘಟನೆ ಹಿಜ್ಬುತ್-ತಹ್ರೀರ್!

Vishwanath S

ವಾಷಿಂಗ್ಟನ್: ವಿಶ್ವದಲ್ಲೇ ಅತ್ಯಂತ ತೀವ್ರಗಾಮಿ ಉಗ್ರ ಸಂಘಟನೆ ಯಾವುದು ಎಂದು ಕೇಳಿದರೆ ಹೆಚ್ಚಿನವರು `ಇಸಿಸ್' ಎಂದು ಉತ್ತರಿಸಬಹುದು. ಆದರೆ, ಸತ್ಯ ಬೇರೆಯೇ ಇದೆ.

ಈವರೆಗೆ ಎಲ್ಲೂ ವಿಶ್ವದ ಗಮನ ಸೆಳೆಯದೇ, ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿರುವ ಭಯೋತ್ಪಾದನಾ ಸಂಘಟನೆಯೊಂದಿದೆ. ಅದರ ಹೆಸರು ಹಿಜ್ಬುತ್- ತಹ್ರೀರ್(ಎಚ್‍ಯುಟಿ). ಇದು ಇಸಿಸ್‍ಗಿಂತಲೂ ಅಪಾಯಕಾರಿಯಾಗಿ ಬೆಳೆಯುತ್ತಿದೆ.

ಅಷ್ಟೇ ಅಲ್ಲ, ದಕ್ಷಿಣ ಏಷ್ಯಾದಲ್ಲಿ ಇದರ ಅಸ್ತಿತ್ವ ಹೆಚ್ಚುತ್ತಿದ್ದು, ಇದು ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗೆಂದು ಅಮೆರಿಕದ ಸಿಟಿಎಕ್ಸ್ ಜರ್ನಲ್ ವರದಿ ಮಾಡಿದೆ.

ಇಸಿಸ್ ಉಗ್ರರು ಸಿರಿಯಾ ಮತ್ತು ಇರಾಕ್‍ನಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದು, ತನ್ನ ಹಿಂಸಾತ್ಮಕ ಕೃತ್ಯಗಳಿಂದ ವಿಶ್ವದೆಲ್ಲೆಡೆ ಗಮನ ಸೆಳೆಯುತ್ತಿದ್ದಾರೆ. ಆದರೆ ಹಿಜ್ಬುತ್- ತೆಹ್ರೀರ್ ಮೌನವಾಗಿ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಸುಮಾರು 50 ರಾಷ್ಟ್ರಗಳಲ್ಲಿ ಇದು ಅಸ್ತಿತ್ವದಲ್ಲಿದ್ದು, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಅಷ್ಟೇ ಅಲ್ಲ, ಇಸಿಸ್‍ಗಿಂತಲೂ ಹೆಚ್ಚು ಅಂದರೆ ವಿಶ್ವಾದ್ಯಂತ 10 ಲಕ್ಷಕ್ಕೂ ಅಧಿಕ ಬೆಂಬಲಿಗರನ್ನು ಎಚ್‍ಯುಟಿ ಹೊಂದಿದೆ. ಭಾರತದಲ್ಲೂ ತಾನು ಕಾಲೂರಿರುವುದಾಗಿ ಈ ಸಂಘಟನೆ ಹೇಳಿಕೊಂಡಿದೆ ಎಂದೂ ವರದಿ ಹೇಳಿದೆ.

SCROLL FOR NEXT