ದೇಶ

ಮೋದಿ ಸೂಟ್ ಹರಾಜಿನ ದುಡ್ಡು ಗಂಗೆಯ ಸ್ವಚ್ಛತೆಗೆ

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ `ಸೂಟ್' ಹರಾಜಿಗಿದೆ. ಬುಧವಾರದಿಂದ ಮೂರು ದಿನ ಸೂರತ್‍ನಲ್ಲಿ ಹರಾಜು ಪ್ರಕ್ರಿಯೆನಡೆಯಲಿದ್ದು, ಉದ್ಯಮಿಗಳ ಸಹಿತ ಹಲವಾರು ಮಂದಿ ಭಾಗಿಗಲಿದ್ದಾರೆ.

ನರೇಂದ್ರ ದಾಮೋದರ ಮೋದಿ ಎಂದು ಚಿನ್ನದ ದಾರದಲ್ಲಿ ಬರೆದಿರುವುದೇ ಅದರ ವಿಶೇಷತೆ. ಇದಲ್ಲದೆ ಪ್ರಧಾನಿ ವಿದೇಶ ಪ್ರವಾಸ ಕೈಗೊಂಡಿದ್ದಾಗ ಮತ್ತು ವಿದೇಶಿ ಅತಿಥಿಗಳು ದೆಹಲಿಗೆ ಭೇಟಿ ನೀಡಿದ್ದ ವೇಳೆ ನೀಡಿದ್ದ ಉಡುಗೊರೆಗಳನ್ನು ಈ ಸಂದರ್ಭದಲ್ಲಿ ಹರಾಜು ಮಾಡಲಾಗುತ್ತದೆ.

ಮೂರು ದಿನಗಳ ಕಾಲ ಹರಾಜು ಮೇಳವನ್ನು ಕೇಂದ್ರ ಸರ್ಕಾರ ಆಯೋಜಿಸಿದೆ. ಈ ಹರಾಜಿನಿಂದ ಬಂದ ಹಣವು ನಮಾಮಿ ಗಂಗೆ ಟ್ರಸ್ಟ್‍ಗೆ ದೇಣಿಗೆ ರೂಪದಲ್ಲಿ ನೀಡಲಾಗುವುದು ಎಂದೂ ಕೇಂದ್ರ ತಿಳಿಸಿದೆ. ಆದರೆ, ಪ್ರಧಾನಿ ಮೋದಿ ಅವರ ಸೂಟ್ ಎಷ್ಟು ಮೊತ್ತಕ್ಕೆ ಹರಾಜಾಗಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.

SCROLL FOR NEXT