ಮುಫ್ತಿ ಮುಹಮ್ಮದ್ ಇಲಿಯಾಸ್ 
ದೇಶ

ಶಿವನೇ ಮುಸ್ಲಿಂರ ಮೊದಲ ಪ್ರವಾದಿ: ಜಮೇತ್ ಉಲೇಮಾ ಮುಫ್ತಿ ಮುಹಮ್ಮದ್

ಅಯೋಧ್ಯೆ: ಹಿಂದೂಗಳ ಆರಾಧ್ಯ ದೈವವಾಗಿರುವ ಶಿವ ಮುಸ್ಲಿಂರ ಮೊದಲ ಪ್ರವಾದಿಯಾಗಿದ್ದರು ಎಂದು ಜಮೇತ್ ಉಲೇಮಾದ ಮುಫ್ತಿ ಮುಹಮ್ಮದ್ ಇಲಿಯಾಸ್ ಹೇಳಿದ್ದಾರೆ.

ಮುಸ್ಲಿಂ ಜನಾಂಗದವರೆಲ್ಲರೂ ಒಂದು ಕಾಲದಲ್ಲಿ ಸನಾತನ ಧರ್ಮದ ಅನುಯಾಯಿಗಳಾಗಿದ್ದರು. ಶಿವನೇ ಮುಸ್ಲಿಮರ ಮೊದಲ ಪ್ರವಾದಿ ಎಂದು ಜಮೇತ್ ಉಲೇಮಾದ ಮುಫ್ತಿ ಮುಹಮ್ಮದ್ ಇಲಿಯಾಸ್ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ಹಿಂದೂ ಸಾಧು, ಸಂತರನ್ನು ಫೆಬ್ರವರಿ 27ರಂದು ನಡೆಯುವ ಕೋಮುಸೌಹಾರ್ದ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲು ಆಗಮಿಸಿದ್ದ ಮುಸ್ಲಿಮ್ ಧರ್ಮಗುರುಗಳು, ಶಿವ ಮತ್ತು ಪಾರ್ವತಿಯರು ತಮ್ಮೆಲ್ಲರ ಸೃಷ್ಟಿಕರ್ತರೂ ಹೌದು ಎಂದು ಅಭಿಪ್ರಾಯಪಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.

ಚೀನಾದವರನ್ನು ಚೀನಿಯರು ಮತ್ತು ಜಪಾನ್ ನವರನ್ನು ಜಪಾನೀಯರು ಎಂದು ಹೇಗೆ ಕರೆಯೊತ್ತಾರೋ, ಅದೇ ರೀತಿ ಭಾರತದಲ್ಲಿರುವವರನ್ನ ಹಿಂದೂಸ್ಥಾನೀ ಎಂದು ಕರೆಯಬಹುದು. ಅದೇ ರೀತಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಕರೆಯಲು ನಮಗೆ ಯಾವುದೇ ವಿರೋಧವಿಲ್ಲ ಎಂದು ಜಮೇತ್ ಉಲೇಮಾ ಅವರು ಹೇಳಿದ್ದಾರೆ.

ಉತ್ತರಪ್ರದೇಶದ ಬಲರಾಮಪುರದಲ್ಲಿ ಫೆ.27ರಂದು ಈ ಕೋಮುಸೌಹಾರ್ದ ಸಮಾವೇಶ ನಡೆಯಲಿದೆ. ಅಲ್ಲಿ ಎಲ್ಲಾ ಧರ್ಮಗಳ ಪ್ರತಿನಿಧಿಗಳು ಪಾಲ್ಗೊಂಡು ಕೋಮುಸೌಹಾರ್ದ ಸಂದೇಶ ಸಾರುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT