ದೇಶ

ಹಣಕ್ಕಾಗಿ ಇಸಿಸ್ ಉಗ್ರರಿಂದ ಅಂಗಾಂಗ ಮಾರಾಟ ಜಾಲ!

ಮುಸ್ಲಿಮೇತರ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ, ಹಣಕ್ಕಾಗಿ ವಿದೇಶಿಗರನ್ನು ಅಪಹರಿಸುವ ಇಸಿಸ್ ಉಗ್ರರು ಅಂಗಾಂಗ ಜಾಲವನ್ನೂ ನಡೆಸುತ್ತಿದ್ದಾರಂತೆ!...

ನ್ಯೂಯಾರ್ಕ್: ಮುಸ್ಲಿಮೇತರ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ, ಹಣಕ್ಕಾಗಿ ವಿದೇಶಿಗರನ್ನು ಅಪಹರಿಸುವ ಇಸಿಸ್ ಉಗ್ರರು ಅಂಗಾಂಗ ಜಾಲವನ್ನೂ ನಡೆಸುತ್ತಿದ್ದಾರಂತೆ!

ಹೌದು, ಉಗ್ರರು ಶಸ್ತ್ರಾಸ್ತ್ರ ಖರೀದಿಗಾಗಿ ಮಾದಕ ವಸ್ತುಗಳ ಮಾರಾಟಗಳಂಥ ಹೀನ ಕೃತ್ಯಗಳಲ್ಲಿ ತೊಡಗಿರುವುದು ಹೊಸದೇನಲ್ಲ. ಆದರೆ, ಇದೇ ಮೊದಲ ಬಾರಿಗೆ ಇಸಿಸ್ ಉಗ್ರರು ಅಂಗಾಂಗ ಮಾರಾಟದಂಥ ಕೃತ್ಯಗಳಲ್ಲಿ ಪಾಲ್ಗೊಂಡಿರುವ ಆರೋಪವೂ ಕೇಳಿ ಬಂದಿದೆ. ಈ ಸಂಬಂಧ ಇರಾಕ್ ವಿಶ್ವಸಂಸ್ಥೆಗೂ ದೂರು ನೀಡಿದೆ. ವಿಶ್ವಸಂಸ್ಥೆ ಈಗ ತನಿಖೆ ಆರಂಭಿಸಿದೆ.

ಯಾಕೆ ಅನುಮಾನ?: ಇಸಿಸ್ ಉಗ್ರರು ಹತ್ಯೆ ಮಾಡಿದ ವ್ಯಕ್ತಿಗಳ ದೇಹ ಛಿದ್ರ ಛಿದ್ರವಾಗಿರುತ್ತದೆ. ಅಲ್ಲದೆ, ಬಹುತೇಕ ಅವರ ಅಂಗಾಂಗಗಳು ನಾಪತ್ತೆಯಾಗಿರುತ್ತವೆ. ಅಂದರೆ ಈ ರೀತಿಯ ಬರ್ಬರ ಹತ್ಯೆಯ ಹಿಂದೆ ಅಂಗಾಂಗ ಮಾರಾಟದ ಸಾಧ್ಯತೆಯೂ ಇದೆ ಎಂದೇ ಅರ್ಥ ಎಂದು ವಿಶ್ವಸಂಸ್ಥೆಯಲ್ಲಿರುವ ಇರಾಕ್ ರಾಯಭಾರಿ ಮೊಹಮ್ಮದ್ ಅಲ್ಹಾಕಿಮ್ ಹೇಳಿದ್ದಾರೆ.

ಇಸಿಸ್ ನಂಥ ಉಗ್ರ ಸಂಘಟನೆಗಳು ಮಾನವೀಯ ಮೌಲ್ಯಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಸುನ್ನಿ, ಶಿಯಾ, ಕ್ರಿಶ್ಚಿಯನ್ನರು, ತುರ್ಕರು, ಶಬಕರು ಸೇರಿದಂತೆ ಇರಾಕ್ ನಲ್ಲಿರುವ ಎಲ್ಲ ಜನಾಂಗೀಯರ ಜತೆಗೂ ಅವರು ಬರ್ಬರವಾಗಿ ನಡೆದುಕೊಂಡಿದ್ದಾರೆ. ಉಗ್ರರು ಸಾರ್ವಜನಿಕರ ಅಂಗಾಂಗಗಳನ್ನು ಕತ್ತರಿಸಿ ಹಾಕುತ್ತಿದ್ದಾರೆಂದರೆ ಅಂಗಾಂಗಗಳ ವ್ಯಾಪಾರ ನಡೆಯುತ್ತಿರುವುದರಲ್ಲಿ ಅನುಮಾನವೇ ಇಲ್ಲ. ಇದು ಇಡೀ ಮಾನವತ್ವ ಕಗ್ಗೊಲೆ ಮಾಡುವಂಥ ಕೃತ್ಯ. ಇದಕ್ಕೆ ಅಂತಾರಾಷ್ಟ್ರೀಯ ಕಾನೂನಿನಂತೆ ಶಿಕ್ಷೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.

ಉಗ್ರರು ಅಂಗಾಂಗ ಮಾರಾಟ ನಡೆಸುತ್ತಿದ್ದರೆ ವಿಶೇಷವೇನಿಲ್ಲ ಎಂದು ತಜ್ಞರೂ ಅಭಿಪ್ರಾಯಪಡುತ್ತಾರೆ. ಯುದ್ಧ, ನಾಗರಿಕ ಸಂಘರ್ಷದ ಸಮಯದಲ್ಲಿ ಅಂಗಾಂಗಗಳ ಕಳ್ಳತನ ಹೊಸದೇನಲ್ಲ ಎಂದು ಬರ್ಕ್ಲಿ ವಿವಿಯ ಶೀಪರ್ ಹಗ್ಸ್ ಅವರು ಅಭಿಪ್ರಾಯ ಪಡುತ್ತಾರೆ. ಇಸಿಸ್ ಉಗ್ರರು ಜನವರಿ ಯೊಂದರಲ್ಲೇ 790 ಮಂದಿಯನ್ನು ಹತ್ಯೆ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿರುವ ಇರಾಕ್ ನ ಈ ಹಿಂದಿನ ರಾಯಭಾರಿ ನಿಕೊಲಯ್ ಮಾಲ್ಡೆನೊವ್ ಹೇಳುತ್ತಾರೆ. ಅಂಗಾಂಗ ಮಾರಾಟ ಮಾಡಿಗಳಿಸಿದ ಹಣವನ್ನೇ ಬಳಸಿಕೊಂಡು ಉಗ್ರರು ಶಕ್ತಿವೃದ್ಧಿಸಿಕೊಳ್ಳುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

SCROLL FOR NEXT