ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತು ರೈತರ ಸಲಹೆ ಪಡೆಯಲು ಎಂಟು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಸತ್ಯಪಾಲ್ ಮಲಿಕ್ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಮಲಿಕ್ ಸೇರಿದಂತೆ ಬಿಜೆಪಿಯ ಏಳು ಸಂಸದರು ಹಾಗೂ ಓರ್ವ ಚಾರ್ಟೆಡ್ ಅಕೌಂಟೆಂಟ್‌ನ್ನು ಒಳಗೊಂಡಿದೆ.
ಈ ಸಮಿತಿಯ ಸದಸ್ಯರು ಉದ್ದೇಶಿತ ಭೂ ಸ್ವಾಧೀನ ಮಸೂದೆ ಬಗ್ಗೆ ರೈತರು ಹಾಗೂ ಇತರೆ ಸಂಘ-ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಸಂಸದರಾದ ಭುಪೇಂದರ್ ಯಾದವ್, ರಾಮ್ ನಾರಾಯಣ ದುಡಿ, ಹುಕಮ್ ದೇವ್ ನಾರಾಯಣ್, ರಾಕೇಶ್ ಸಿಂಗ್, ಸಂಜಯ್ ದೋತ್ರೆ ಮತ್ತು ಸುರೇಶ್ ಅಂಗಡಿ ಹಾಗೂ ಚಾರ್ಟೆಡ್ ಅಕೌಂಟೆಂಟ್ ಗೋಪಾಲ್ ಅಗರವಾಲ್ ಅವರು ಶಾ ಸಮಿತಿಯ ಸದಸ್ಯರಾಗಿದ್ದಾರೆ.