ದೇಶ

ಹಜಾರೆಯನ್ನು ದೆಹಲಿ ಸಚಿವಾಲಯಕ್ಕೆ ಆಹ್ವಾನಿಸಿದ ಕೇಜ್ರಿವಾಲ್

Mainashree

ನವದೆಹಲಿ: ಅಣ್ಣಾ ಹಜಾರೆ ಆಗಮನದಿಂದ ದೆಹಲಿ ಸಚಿವಾಲಯ ಶುದ್ಧವಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.

ಮಂಗಳವಾರ ಅಣ್ಣಾ ಹಜಾರೆಯೊಂದಿಗೆ ಧರಣಿಯಲ್ಲಿ ಪಾಲ್ಗೊಂಡಿದ್ದ ಕೇಜ್ರಿವಾಲ್, ಅಣ್ಣಾ ಹಜಾರೆಯವರಿಗೆ ದೆಹಲಿ ಸಚಿವಾಲಯಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ.

ಅಣ್ಣಾ ಆಗಮನದಿಂದ ಒಳ್ಳೆಯ ಕೆಲಸಕ್ಕೆ ಸ್ಫೂರ್ತಿ ಸಿಗಲಿದ್ದು, ಸಚಿವಾಲಯ ಶುದ್ಧವಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಭೂಸ್ವಾಧೀನ ಸುಗ್ರೀವಾಜ್ಞೆ ವಿರೋಧಿಸಿದ ಕೇಜ್ರಿವಾಲ್, ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ತುಂಬಾ ಅಹಂಕಾರವಿತ್ತು. ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾಂಗ್ರೆಸ್‌ಗಿಂತ ಒಂದು ಹೆಜ್ಜೆ ಮುಂದಿದ್ದು, ಇಂತಹ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಕೇಜ್ರಿವಾಲ್‌ಗೆ ಸಾಥ್ ನೀಡಿದ್ದ ಮನೀಷ್ ಸಿಸೋಡಿಯಾ ಅವರು ಮಾತನಾಡಿ, ಅಣ್ಣಾ ಹಜಾರೆ ಅವರೊಂದಿಗೆ ಚುನಾವಣೆ ಫಲಿತಾಂಶ ಹಾಗೂ ಭೂ ಸ್ವಾಧೀನ ಸುಗ್ರೀವಾಜ್ಞೆ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT