ಬೆಂಗಳೂರು : ಬ್ಯಾಂಕ್ ಅಧಿಕಾರಿಗಳ ಹಾಗೂ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಉದ್ದೇಶಿತ ಮುಷ್ಕರವನ್ನು ಹಿಂಪಡೆಯಲಾಗಿದೆ.
ವೇತನ ಪರಿಷ್ಕರಣೆ ವಿಚಾರ ನನೆಗುದಿಗೆ ಬಿದ್ದಿದ್ದ ಹಿನ್ನೆಲೆಯಲ್ಲಿ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ ಫೆ .25ರಿಂದ ನಾಲ್ಕು ದಿನಗಳ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಿತ್ತು. ನವೆಂಬರ್ 2012 ರಿಂದ ಶೇ.15ರಷ್ಟು ವೇತನ ಹೆಚ್ಚಿಸಲು ಸರ್ಕಾರ ಇದೀಗ ಒಪ್ಪಿದೆ. ಇನ್ನು ಮುಂದೆ ಬ್ಯಾಂಕ್ ಗಳಿಗೆ ಪ್ರತಿ ತಿಂಗಳ 2 ಮತ್ತು 4ನೇ ಶನಿವಾರ ಪೂರ್ಣ ರಜೆಯಿದ್ದು, ಉಳಿದ ಶನಿವಾರ ಪೂರ್ಣಾವಧಿ ಕಾರ್ಯ ನಿರ್ವಹಿಸು ವುದಾಗಿ ಬ್ಯಾಂಕ್ ಯೂನಿಯನ್ ರಾಜ್ಯ ಸಂಚಾಲಕ ವಸಂತ್ ರೈ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈ, ಏಳು ವರ್ಷಗಳಿಂದ ನಮ್ಮ ವೇತನ ಪರಿಷ್ಕರಣೆ
ಯಾಗಿಲ್ಲ. ದೇಶದಲ್ಲಿ ಅನುತ್ಪಾದಕ ಸಾಲಗಳು ವರ್ಷಕ್ಕೆ ರು. 1.5 ಲಕ್ಷ ಕೋಟಿಗಿಂತಲೂ ಹೆಚ್ಚಿದೆ. ಆದರೆ ನಮ್ಮ ವೇತನ ಪರಿಷ್ಕರಣೆಗೆ ರು. 10 ಸಾವಿರ ಕೋಟಿಗಿಂತ ಕಡಿಮೆ ಸಾಕು ಎಂದರು.