ಭರತ್‌ಪುರ್: ನೊಬಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮದರ್ ತೆರೇಸಾ ಅವರು ಬಡವರ ಸೇವೆ ಮಾಡುತ್ತಿದ್ದುದರ ಹಿಂದಿನ ಮೂಲ ಉದ್ದೇಶ ಮತಾಂತರವಾಗಿತ್ತು ಎಂದು ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಜಸ್ಥಾನದ ಭರತ್‌ಪುರ್‌ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಮದರ್ ತೆರೇಸಾ ಅವರ ಸೇವೆ ನಿಸ್ವಾರ್ಥವಾಗಿತ್ತು. ಆದರೆ ಆ ಸೇವೆಯ ಹಿಂದಿನ ಉದ್ದೇಶ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದೇ ಆಗಿತ್ತು ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ.