ದೇಶ

ಭಾರತ-ಪಾಕ್ ಮಾತುಕತೆಗೆ ಮಾ.3ರ ಮುಹೂರ್ತ

Srinivasamurthy VN

ಇಸ್ಲಾಮಾಬಾದ್: 7 ತಿಂಗಳ ಮನಸ್ತಾಪದ ಬಳಿಕ ಮತ್ತೆ ಭಾರತ-ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ.

ಮಾರ್ಚ್ 3ರಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಪಾಕ್ ಪ್ರವಾಸ ಆರಂಭಿಸಲಿದ್ದು, ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಅಝಾಝ್ ಅಹ್ಮದ್ ಚೌಧರಿ ಅವರನ್ನು ಭೇಟಿಯಾಗಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಶಿಮ್ಲಾ ಒಪ್ಪಂದ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಈ ವೇಳೆ ಚರ್ಚೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಜೈಶಂಕರ್ ಅವರು ಸಾರ್ಕ್ ಯಾತ್ರೆ ನಡೆಸಲಿದ್ದು, ಮಾರ್ಚ್‍ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯ್ಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

SCROLL FOR NEXT