ಭೋಪಾಲ್: ಮಧ್ಯಪ್ರದೇಶ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್‍ಗಳ ನೇಮಕದಲ್ಲಿನ ಅವ್ಯವಹಾರ ಆರೋಪ ಈಗ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರನ್ನೂ
ಸುತ್ತಿಕೊಂಡಿದೆ.
ನೇಮಕ ಪ್ರಕ್ರಿಯೆ ಸಂಬಂಧ ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ (ಎಂಪಿಪಿಇಬಿ) ನಡೆಸಿದ ಪರೀಕ್ಷೆಯಲ್ಲಿ ಅವ್ಯಹಾರ ನಡೆದಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ) ಯಾದವ್ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಐವರು ಅಭ್ಯರ್ಥಿ ಗಳನ್ನು ಗಾರ್ಡ್‍ಗಳನ್ನಾಗಿ ನೇಮಿಸಬೇಕು ಎಂದು ಮಂಡಳಿ ಅಧಿಕಾರಿ ಗಳಿಗೆ ಹಾಲಿ ರಾಜ್ಯಪಾಲರು ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಫೆ.20 ರಂದು ಮಧ್ಯಪ್ರದೇಶ ಹೈಕೋರ್ಟ್ ಪ್ರಕರಣ ಸಂಬಂಧ ಎಸ್‍ಐಟಿ ಯಾವುದೇ ತನಿಖೆ ನಡೆಸಲು ಸ್ವತಂತ್ರವಾಗಿದೆ ಎಂದಿದ್ದ ಹಿನ್ನೆಲೆಯಲ್ಲಿ ಅದು ಈ ಕ್ರಮ ಕೈಗೊಂಡಿದೆ.