ಅಯೋಧ್ಯೆ: ಹಲವು ವರ್ಷಗಳಿಂದ ತಿಕ್ಕಾಟಕ್ಕೆ ಕಾರಣವಾಗಿರುವ ಅಯೋಧ್ಯೆ ವಿವಾದ ಪರಿಹಾರವಾಗುವ ಹಂತ ತಲುಪಿದೆಯೇ? ಬಾಬರಿ ಮಸೀದಿ ಧ್ವಂಸ ಪ್ರಕರಣದ
ಪ್ರಮುಖ ಅರ್ಜಿದಾರ ಹಾಶಿಂ ಅನ್ಸಾರಿ ಮಂಗಳವಾರ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ಜ್ಞಾನ್ ದಾಸ್ರನ್ನು ಭೇಟಿಯಾಗಿದ್ದು, ಅಯೋದ್ಯೆ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಪ್ರಸ್ತಾಪದ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಈ ಸಂಧಾನ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ ಮುಂದಿಡಲೂ ಚಿಂತನೆ ನಡೆಸಿದ್ದಾರೆ. 70 ಎಕರೆ ವಿವಾದಿತ ಪ್ರದೇಶದಲ್ಲಿ ಮಸೀದಿ ಮತ್ತು ದೇವಾಲಯ ಎರಡನ್ನೂ ನಿರ್ಮಿಸಿ, ಅವುಗಳ ಮಧ್ಯೆ 100 ಅಡಿ ಎತ್ತರದ ಗೋಡೆ ಕಟ್ಟುವುದು ಇವರು ಕಂಡುಕೊಂಡ ಪರಿಹಾರ