ದೇಶ

ಲೈಂಗಿಕ ಕಿರುಕುಳ: ವಿಜ್ಞಾನಿ ಆರ್.ಕೆ ಪಚೌರಿ ಆಸ್ಪತ್ರೆಗೆ ದಾಖಲು

Mainashree

ನವದೆಹಲಿ: ಮಹಿಳಾ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವಿಜ್ಞಾನಿ ಆರ್.ಕೆ ಪಚೌರಿ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಮಹಿಳಾ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ನಿನ್ನೆ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ತಜ್ಞರ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ವಿಜ್ಞಾನಿ ಆರ್.ಕೆ ಪಚೋರಿ ಅವರು ರಾಜಿನಾಮೆ ನೀಡಿದ್ದರು.

ಪ್ರಕರಣ ಸಂಬಂಧ ರಾಜೇಂದ್ರ ಕೆ.ಪಚೌರಿ ಅವರು ಬಂಧನಕ್ಕೆ ದೆಹಲಿ ಕೋರ್ಟ್ ಫೆ.26ರವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಸೆಕ್ಷನ್ 354ಎ ಮತ್ತು 354 ಡಿ ಅಡಿಯಲ್ಲಿ ಲೈಂಗಿಕ ಕಿರುಕುಳ ಆರೋಪ ಹಾಗೂ ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಬೆದರಿಕೆ ಅಪರಾಧದ ಆರೋಪಗಳಲ್ಲಿ ಫೆ.13ರಂದು ಪಚೌರಿ ಅವರು ವಿರುದ್ಧ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ತನ್ನ ಮೇಲಿನ ಆರೋಪಗಳ ತನಿಖೆಯಲ್ಲಿ ತಾನು ಪ್ರಭಾವ ಬೀರಿಯೇನು ಎಂಬ ಬಗ್ಗೆ ಕೆಲವರಲ್ಲಿ ಇರುವ ಭಯವನ್ನು ನಿವಾರಿಸುವ ಸಲುವಾಗಿ ತಾನು ರಜೆಯ ಮೇಲೆ ಹೋಗಲು ನಿರ್ಧರಿಸಿದ್ದೇನೆ ಎಂದು ಪಚೌರಿ ಅವರು ಈ ಮೊದಲು ಪತ್ರ ಬರೆದಿದ್ದರು. ಇದರ ಬೆನ್ನಲ್ಲೆ ಇಂದು ವಿಶ್ವ ಸಂಸ್ಥೆಯ ಹವಾಮಾನ ವೈಪರೀತ್ಯ ತಜ್ಞರ ಸಮಿತಿಯಿಂದ ಹೊರ ನಡೆದಿದ್ದರು.

SCROLL FOR NEXT