ನವದೆಹಲಿ: ಬೆಂಗಳೂರಿನಲ್ಲಿ ರು.18,400 ಕೋಟಿ ವೆಚ್ಚದ ಷಟ್ಪಥ ರಸ್ತೆಯ 3 ಮೇಲ್ಸೇತುವೆಗಳನ್ನು ನಿರ್ಮಿಸಲು ನೆರವು ನೀಡುವಂತೆ ರಾಜ್ಯದ ನಿಯೋಗ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿತು.
ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್, ರಾಜ್ಯದ ವಾರ್ತಾ, ಮೂಲಸೌಕರ್ಯ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಎನ್.ಶಾಂತ ಕುಮಾರಿ, ಉಪಮೇಯರ್, ಹಲವು ಸ್ಥಾಯಿ ಸಮಿತಿಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ನಿಯೋಗ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಬೆಂಗಳೂರಿನಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ನಗರದ ಹೃದಯ ಭಾಗವಾಗಿರುವ ಸಿಲ್ಕ್ ಬೋರ್ಡ್‍ನಿಂದ ಕಂಟೋನ್ಮೆಂಟ್, ಕೆ.ಆರ್.ಪುರದಿಂದ ಯಶವಂತಪುರ ಹಾಗೂ ವರ್ತೂರು ಕೋಡಿಯಿಂದ ಜ್ವಾನ ಭಾರತಿವರೆಗೆ ಒಟ್ಟು 75 ಕಿ.ಮೀ ಉದ್ದದ 3 ಮೇಲ್ಸೇತುವೆಗಳನ್ನು ನಿರ್ಮಿಸಲು ಪ್ರಸ್ತಾವನೆ ಸಿದ್ದಪಡಿಸಲಾಗಿದೆ.