ಎ.ಬಿ.ಡಿವಿಲಿಯರ್ಸ್‌ 
ದೇಶ

ವೆಸ್ಟ್‌ಇಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ

ವಿಶ್ವಕಪ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ 257 ರನ್‌ಗಳ ಭರ್ಜರಿ...

ಸಿಡ್ನಿ: ವಿಶ್ವಕಪ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ 257 ರನ್‌ಗಳ ಭರ್ಜರಿ ಗೆಲುವು ಕಂಡಿದೆ.

ಸಿಡ್ನಿಯಲ್ಲಿ ಶುಕ್ರವಾರ ನಡೆದ ವಿಶ್ವಕಪ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 408 ರನ್‌ಗಳ ಬೃಹತ್‌ ಸವಾಲು ಬೆನ್ನೆಟ್ಟಿದ ವೆಸ್ಟ್‌ಇಂಡಿಸ್‌ಗೆ  33.1 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡಿತು.

ಕೇವಲ 151 ರನ್ ಗಳಿಸಿದ ವೆಸ್ಟ್ಇಂಡೀಸ್, ಇಮ್ರಾನ್‌ ತಾಹಿರ್‌ ಬೌಲಿಂಗ್‌ ದಾಳಿಗೆ ತತ್ತರಿಸಿ  257 ರನ್‌ ಭಾರಿ ಅಂತರದಿಂದ ಸೋಲೊಪ್ಪಿಕೊಂಡಿತು. 10 ಓವರ್‌ ಬೌಲಿಂಗ್‌ ಮಾಡಿದ ತಾಹಿರ್‌ 45 ರನ್‌ ನೀಡಿ ಪ್ರಮುಖ 5 ವಿಕೆಟ್‌ ಕೆಡವಿದರು.

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಎ.ಬಿ.ಡಿವಿಲಿಯರ್ಸ್‌ ಕೇವಲ 52 ಎಸೆತಗಳಲ್ಲಿ ಶತಕ ಸಿಡಿಸಿ, 2ನೇ ಅತಿ ವೇಗದ ಶತಕ ಬಾರಿಸಿದ್ದಾರೆ. ಶತಕ ಪೂರೈಸಿದ ಅವರು ಔಟಾಗದೆ 162 ರನ್‌ ಗಳಿಸಿದರು.

 ವಿಂಡೀಸ್‌ ಪರ ಸ್ಮಿತ್‌ (31), ರಾಮ್‌ದೀನ್‌ (22), ಹೋಲ್ಡರ್‌ (56) ಮತ್ತು ಕೊನೆಯಲ್ಲಿ ಟೇಲರ್‌ 15 ರನ್‌ ಗಳಿಸಿದ್ದು ಬಿಟ್ಟರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಒಂದಂಕಿ ಗಡಿಯನ್ನೂ ದಾಟಲಿಲ್ಲ. ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್‌ ಭರವಸೆ ಎನಿಸಿದ್ದ ಕ್ರೀಸ್‌ ಗೇಲ್‌ 3 ರನ್‌ ಗಳಿಸಿ ಅಬ್ಬಾಟ್‌ಗೆ ವಿಕೆಟ್‌ ಒಪ್ಪಿಸುವುದರೊಂದಿಗೆ ತಂಡದ ಪತನ ಆರಂಭವಾಯಿತು. 63 ರನ್‌ ಆಗುವಷ್ಟರಲ್ಲಿ ಪ್ರಮುಖ 7 ವಿಕೆಟ್‌ಗಳು ಪತನವಾಗಿದ್ದವು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ದಕ್ಷಿಣ ಆಫ್ರಿಕಾ ನಾಯಕ ಡಿವಿಲಿಯರ್ಸ್ ಅವರ ಸ್ಫೋಟಕ ಶತಕದ ನೆರವಿನಿಂದ ವಿಂಡೀಸ್‌ ಗೆಲುವಿಗೆ 409  ರನ್‌ಗಳ ಬೃಹತ್‌ ಸವಾಲು ನೀಡಿತು.

5ನೇ ವಿಕೆಟ್‌ಗೆ ಕ್ರೀಸಿಗಿಳಿದ  ಡಿವಿಲಿಯರ್ಸ್‌ ವಿಂಡೀಸ್‌ ಬೌಲರ್‌ಗಳನ್ನು ಮನಬಂದಂತೆ ಥಳಿಸಿದರು. ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದ ಅವರು ಔಟಾಗದೆ 162 ರನ್‌ ಗಳಿಸಿದರು. ಅವರ ಸ್ಕೋರಿನಲ್ಲಿ ಆಕರ್ಷಕ 17 ಬೌಂಡರಿ ಮತ್ತು 8 ಸಿಕ್ಸರ್‌ ಸೇರಿವೆ.  ಕೊನೆಯ 6 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 108 ರನ್‌ ಗಳಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬೇಡಿ, ಸಾರ್ವಜನಿಕ ಹೇಳಿಕೆ ಕೊಡಬೇಡಿ': ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬುದ್ದಿಮಾತು

'ನೀವು ಶಾಶ್ವತ ವಿಪತ್ತು ನಿಧಿ ಏಕೆ ರಚಿಸಿಲ್ಲ': ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ

ಬೆಂಗಳೂರಿನಲ್ಲಿ ಭಯಾನಕ ರೋಡ್ ರೇಜ್: ಬೈಕ್ ಸವಾರನ ಬೆನ್ನಟ್ಟಿ ಲಾರಿ ಗುದ್ದಿಸಿ ಹತ್ಯೆಗೆ ಯತ್ನಿಸಿದ ಚಾಲಕ!

ರೈಲಿನಲ್ಲಿ ನಿದ್ದೆಗೆ ಜಾರಿದ ವ್ಯಾಪಾರಿ; 5.53 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ!

ಜೈಪುರ-ಬಿಕಾನೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್-ಟ್ರಕ್ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು, 27 ಜನರಿಗೆ ಗಾಯ

SCROLL FOR NEXT