ಟಿಬೆಟ್‌ನ ಧರ್ಮಗುರು ದಲೈಲಾಮಾ 
ದೇಶ

ಭಾರತೀಯರು ನನ್ನ ಗುರು ಎಂದ ದಲೈಲಾಮ

ಗುಜರಾತ್‌ಗೆ ಭೇಟಿ ನೀಡಿದ್ದ ಟಿಬೆಟ್‌ನ ಧರ್ಮಗುರು ದಲೈಲಾಮಾ ಭಾರತೀಯರು ನನ್ನ...

ಸೂರತ್: ಗುಜರಾತ್‌ಗೆ ಭೇಟಿ ನೀಡಿದ್ದ ಟಿಬೆಟ್‌ನ ಧರ್ಮಗುರು ದಲೈಲಾಮಾ ಭಾರತೀಯರು ನನ್ನ ಗುರುಗಳು ಎಂದು ಗುರುವಾರ ಹೇಳಿದ್ದಾರೆ.

ನಿನ್ನೆ ಗುಜರಾತ್‌ಗೆ ಭೇಟಿ ನೀಡಿದ್ದ ದಲೈಲಾಮಾ ಭಾರತೀಯರನ್ನು ತನ್ನ ಗುರುಗಳೆಂದು ಪರಿಗಣಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ನನ್ನ ಮನಸ್ಸಿನ ತುಂಬಾ ನಲಂದಾ ಕುರಿತ ವಿಚಾರಗಳೇ ತುಂಬಿಕೊಂಡಿದೆ. ಇದು ಪುರಾತನ ವಿಶ್ವವಿದ್ಯಾಲಯ. ಹಾಗಾಗಿ, ನಾನು ಭಾರತೀಯರನ್ನು ನನ್ನ ಗುರುಗಳೆಂದು ಪರಿಗಣಿಸುತ್ತೇನೆ ಎಂದು ತಿಳಿಸಿದ್ದಾರೆ.

ನಾವು ಕೇವಲ ಅನುಯಾಯಿ. ಆದ್ದರಿಂದ ಸಹಜವಾಗಿ ನಾನು ನಮ್ಮ ಗುರುಗಳಿಗೆ ನನ್ನು ಶುಭಾಶಯಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದ ಅವರು, ಸಾಂಪ್ರದಾಯಿಕ ಮತ್ತು ಐತಿಹಾಸಿಕವಾಗಿ ಭಾರತೀಯರನ್ನು ನನ್ನ ಗುರುಗಳೆಂದು ಭಾವಿಸಿದ್ದೇನೆ ಎಂದಿದ್ದಾರೆ.

ತಮ್ಮ ತಾಯಿಯ ನೆನಪಿಗಾಗಿ ಸೂರತ್ ಮೂಲದ ಉದ್ಯಮಿಯೊಬ್ಬರು ಸಾಮಾಜಿಕ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಸಂತೋಕ್ಬ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ. ಈ ಬಾರಿ ಈ ಪ್ರಶಸ್ತಿಗೆ ಟಿಬೆಟ್‌ನ ಗುರು ದಲೈಲಾಮಾ ಅವರನ್ನು ಆಯ್ಕೆ ಮಾಡಲಾಗಿತ್ತು. ಇದನ್ನು ಸ್ವೀಕರಿಸಲು ದಲೈಲಾಮ ಸೂರತ್‌ಗೆ ಭೇಟಿ ನೀಡಿದ್ದರು.

ಪ್ರಶಸ್ತಿ ಸ್ವೀಕರಿಸಿದ ನಂತರ ದಲೈಲಾಮಾ ಅವರು ವೀರ್ ನರ್ಮದಾ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ