ದೇಶ

ಏರ್‌ಏಷ್ಯಾ ಪತನ: 2 ಬೃಹತ್ ಗಾತ್ರದ ವಸ್ತು ಪತ್ತೆ

ಜಾವಾ ಸಮುದ್ರದಲ್ಲಿ ಪತನವಾಗಿರುವ ಏರ್ ಏಷ್ಯಾ ವಿಮಾನ(8501)ದ ಭಗ್ನಾವಶೇಷ...

ಜಕಾರ್ತ: ಜಾವಾ ಸಮುದ್ರದಲ್ಲಿ ಪತನವಾಗಿರುವ ಏರ್ ಏಷ್ಯಾ ವಿಮಾನ(8501)ದ ಭಗ್ನಾವಶೇಷ ಹುಡುತ್ತಿರುವ ತಂಡಕ್ಕೆ ಎರಡು ಬೃಹತ್ ಗಾತ್ರದ ವಸ್ತುಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸಾಗರ ತಳದಲ್ಲಿ ವಿಮಾನದ ಮುಖ್ಯಭಾಗವನ್ನು ಹೋಲುವ ಎರಡು ಬೃಹತ್ ಗಾತ್ರದ ವಸ್ತುಗಳು ಪತ್ತೆಯಾಗಿವೆ ಎಂದು ಇಂಡೊನೇಷ್ಯಾದ ರಾಷ್ಟ್ರೀಯ ಶೋಧನಾ ಮತ್ತು ರಕ್ಷಣಾ ಪಡೆಯ ಅಧಿಕಾರಿ ಬಂಬಾಂಗ್ ಸೊಯೆಲಿಸ್ಟ್ಯೊ ಅವರು ಮಾಹಿತಿ ನೀಡಿದ್ದಾರೆ.

ವಿಮಾನದ ಭಗ್ನಾವಶೇಷ ಹಾಗೂ ವಿಮಾನದ ಬ್ಲ್ಯಾಕ್ ಬಾಕ್ಸ್ ಇನ್ನು ಪತ್ತೆಯಾಗಿಲ್ಲ. ಬ್ಲ್ಯಾಕ್ ಬಾಕ್ಸ್ ಸೇರಿದಂತೆ ಇತರೆ ಅವಶೇಷಗಳ ಪತ್ತೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಇಂಡೋನೇಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಭಾನುವಾರ ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ 162 ಜನರನ್ನು ಕರೆದೊಯ್ಯುತ್ತಿದ್ದ ಏರ್‌ಏಷ್ಯಾ ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ (ಕ್ಯೂಜಡ್ 8501) ವಿಮಾನ ಡಿ.28ರಂದು ವಿಮಾನ ನಿಯಂತ್ರಣ ಕೇಂದ್ರದ ಸಂಪರ್ಕವನ್ನು ಕಡಿದುಕೊಂಡ ಬಳಿಕ ನಾಪತ್ತೆಯಾಗಿತ್ತು. ಹಲವಾರು ದಿನಗಳ ಶೋಧದ ನಂತರ ಅವಶೇಷಗಳು ಮತ್ತು ಶವಗಳು ಈಗ ಪತ್ತೆಯಾಗುತ್ತಿವೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ