ದೇಶ

ಆರೀಬ್ ಚಟುವಟಿಕೆ ಅಮೆರಿಕದ ನೆರವು ಕೋರಿಕೆ

Srinivasamurthy VN

ನವದೆಹಲಿ: ಉಗ್ರ ಸಂಘಟನೆ ಇಸಿಸ್‌ನಲ್ಲಿ ಕೆಲಸ ಮಾಡಿ, ವಾಪಸಾಗಿರುವ ಆರೀಬ್ ಮಜೀದ್‌ನ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಈಗ ವಿದೇಶಗಳ ಬಾಗಿಲು ತಟ್ಟಿದೆ.

ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದ ಅಧಿಕಾರಿಗಳನ್ನು ಸಂಪರ್ಕಿಸಿರುವ ಎನ್‌ಐಎ, ಮ್ಯೂಚ್ಯುವಲ್ ಲೀಗಲ್ ಅಸಿಸ್ಟೆನ್ಸ್ ಟ್ರೀಟಿ (ಎಂಎಲ್‌ಎಟಿ) ಅನ್ವಯ ಮಜೀದ್ ವಿರುದ್ಧ ಸೈಬರ್ ಸಾಕ್ಷ್ಯ.ಗಳನ್ನು ಒದಗಿಸುವಂತೆ ಕೋರಿದೆ.

ಇರಾಕ್, ಸಿರಿಯಾಗೂ ಕೋರಿಕೆ ಪತ್ರ
ತನಿಖೆಯ ವೇಳೆ ಮಜೀದ್, ತಾನು ಇಸಿಸ್ ನಲ್ಲಿರುವಾಗ ಯಾವುದೇ ಉಗ್ರ ಕೃತ್ಯಗಳಲ್ಲಿ ಪಾಲ್ಗೊಂಡಿಲ್ಲ ಎಂದು ತಿಳಿಸಿದ್ದಾನೆ. ಆದರೆ ಇದನ್ನು ನಂಬಲು ಎನ್‌ಐಎ ಸಿದ್ದವಿಲ್ಲ. ಹೀಗಾಗಿ ವಿವಿಧ ರಾಷ್ಟ್ರಗಳಿಂದ ಸೈಬರ್ ಮಾಹಿತಿ ಪಡೆಯಲು ಎನ್‌ಐಎ ನಿರ್ಧರಿಸಿದೆ. ಸೈಬರ್ ಭಯೋತ್ಪಾದನೆ ಪ್ರಕರಣಗಳಲ್ಲಿ ಹೆಚ್ಚಿನ ಸಹಕಾರ ನೀಡುವ ಅಮೆರಿಕವು, ಈಗಾಗಲೇ ಮಜೀದ್‌ನ ಇಂಟರ್ನೆಟ್ ಪ್ರೋಟೋಕಾಲ್ ಅಡ್ರೆಸ್ ಅನ್ನು ಭಾರತಕ್ಕೆ ಒದಗಿಸಿದೆ.

ಇದೇ ವೇಳೆ, ಮಜೀದ್ ಇರಾಕ್ ಮೂಲಕ ಪ್ರವೇಶಿಸಿ, ಸಿರಿಯಾ ಮೂಲಕ ವಾಪಸಾಗಿದ್ದಾನೆ ಎಂಬುದು ಆತನ ಪಾಸ್‌ಪೋರ್ಟ್‌ನಿಂದ ತಿಳಿದುಬಂದಿದೆ. ಹೀಗಾಗಿ ಈ ಎರಡೂ ರಾಷ್ಟ್ರಗಳಿಗೆ ಕೋರಿಕೆ ಪತ್ರವನ್ನು ಕಳುಹಿಸಲೂ ಎನ್‌ಐಎ ಚಿಂತನೆ ನಡೆಸಿದೆ.

SCROLL FOR NEXT