ದೇಶ

ಘರ್‌ವಾಪಸಿ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಮೌನ

ಅಹಮದಾಬಾದ್: ಹದಿನೈದು ದಿನಗಳ ಹಿಂದಷ್ಟೇ ಘರ್ ವಾಪಸಿ ಕುರಿತು ಬಹಿರಂಗ ಹೇಳಿಕೆ ನೀಡುತ್ತಿದ್ದ ಆರೆಸ್ಸೆಸ್ ಈಗ ಆ ಕುರಿತ ವಿವಾದದಿಂದ ದೂರ ಉಳಿಯಲು ನಿರ್ಧರಿಸಿದೆ. ಆರೆಸ್ಸಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಘರ್‌ವಾಪಸಿ ಕುರಿತು ಮೌನಕ್ಕೆ ಶರಣಾಗಿದ್ದಾರೆ.

ಡಿ.20ರಂದು ಕೊಲ್ಕತಾದಲ್ಲಿ ನಡೆದ ಸಭೆಯಲ್ಲಿ ಭಾಗವತ್ ಅವರು ಘರ್‌ವಾಪಸಿ ಕಾರ್ಯಕ್ರಮವನ್ನು ಬೆಂಬಲಿಸಿ ಮಾತನಾಡಿದ್ದರು. ಹಿಂದೂಗಳನ್ನು ಬಲವಂತವಾಗಿ, ಆಮಿಷ ತೋರಿಸಿ ಅನ್ಯಮತಕ್ಕೆ ಮತಾಂತರ ಮಾಡಲಾಗಿತ್ತು. ಈಗ ಅವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದರು. ಆದರೆ, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಕಳೆದ ವಾರ ನಡೆದ ಮಾತುಕತೆ ಬಳಿಕ ಪರಿಸ್ಥಿತಿ ಬದಲಾಗಿದೆ.

ಘರ್‌ವಾಪಸಿ ವಿವಾದ ಕೇಂದ್ರ ಸರ್ಕಾರದ ಅಭಿವೃದ್ಧಿ ಅಜೆಂಡಾದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಆ ಕುರಿತು ಹೇಳಿಕೆ ನೀಡಿ ಮತ್ತೊಂದು ವಿವಾದ ಸೃಷ್ಟಿಸದಿರಲು ಭಾಗವತ್ ನಿರ್ಧರಿಸಿದ್ದಾರೆ. ಇತರೆ ಧರ್ಮಗಳು ಸಹಿಷ್ಣುತೆಯ ಪಾಠ ಹೇಳುವ ಮೊದಲೇ ಹಿಂದೂ ಧರ್ಮ ಎಲ್ಲರನ್ನೂ ಒಪ್ಪಿಕೊಳ್ಳುವ ಸಂದೇಶ ನೀಡಿತ್ತು. ಇದು ಭಾರತದ ಸನಾತನ ಸಂಸ್ಕೃತಿ ಎಂದಷ್ಟೇ ಅವರು ಹೇಳಿದ್ದಾರೆ.

SCROLL FOR NEXT