ದೇಶ

ಬಂಡವಾಳ ಹಿಂದಕ್ಕೆ: ಕಲ್ಲಿದ್ದಲು ನೌಕರರ ಮುಷ್ಕರ ಆರಂಭ

ಕೋಲ್ಕತಾ/ನವದೆಹಲಿ: ಕೋಲ್ ಇಂಡಿಯಾದಿಂದ ಬಂಡವಾಳ ಹಿಂಪಡೆಯುವುದು ಮತ್ತು ಪುನಾ ರಚನೆ ವಿರೋಧಿಸಿ ಸಂಸ್ಥೆಯ 3.5 ಲಕ್ಷ ನೌಕರರು ಮಂಗಳವಾರದಿಂದ 5 ದಿನಗಳ ಕಾಲ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ಶೇ.60 ರಷ್ಟು ಕಲ್ಲಿದ್ದಲು ಉತ್ಪಾದನೆ ಈಗಾಗಲೇ ಸ್ಥಗಿತಗೊಂಡಿದೆ. ಮುಷ್ಕರಕ್ಕೆ ಕರೆ ನೀಡಿರುವ ಕಾರ್ಮಿಕ ಸಂಘಟನೆಗಳೊಂದಿಗೆ ಕೇಂದ್ರ ಮಾತುಕತೆ ಆರಂಭಿಸಿದ್ದು, ಅದು ವಿಫಲವಾಗಿದೆ.

1977ರಲ್ಲಿ ನಡೆದ ಅತಿದೊಡ್ಡ ಮುಷ್ಕರದ ಬಳಿಕ ಇದೇ ಮೊದಲ ಬಾರಿಗೆ ಸಂಸ್ಥೆಯ ನೌಕರರು ಬೃಹತ್ ಪ್ರಮಾಣದಲ್ಲಿ ಮುಷ್ಕರಕ್ಕೆ ಮುಂದಾಗಿದ್ದಾರೆ. ನೌಕರರ ನಿರ್ಧಾರದಿಂದಾಗಿ 438ರ ಪೈಕಿ 271 ಘಟಕಗಳಲ್ಲಿ ಕಾರ್ಯ ಸ್ಥಗಿತಗೊಂಡಿವೆ. ಮೊದಲ ದಿನದ ನಷ್ಟ ಸುಮಾರು 35 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಬಿಜೆಪಿ ನೇತೃತ್ವದ ಭಾರತೀಯ ಮಜ್ದೂರ್ ಸಭಾ ಮುಷ್ಕರಕ್ಕೆ ಕರೆ ನೀಡಿದೆ. ಇದರ ಜತೆಗೆ ಇತರ ನಾಲ್ಕು ಪ್ರಮುಖ ಕಾರ್ಮಿಕ ಸಂಘಟನೆಗಳೂ ಬೆಂಬಲ ಸೂಚಿಸಿವೆ.

SCROLL FOR NEXT