ದೇಶ

ಹೆಚ್ಚಿನ ಪರೀಕ್ಷೆಗಾಗಿ ಸುನಂದಾ ಕರುಳಿನ ಮಾದರಿಗಳು ವಿದೇಶಕ್ಕೆ

Mainashree

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ವಿಷ ಪ್ರಾಶನದಿಂದ ಸಾವನ್ನಪಿದ್ದು, ಹೆಚ್ಚಿನ ಪರೀಕ್ಷೆಗಾಗಿ ಅವರ ದೇಹದ ಕರುಳಿನ ಮಾದರಿಗಳನ್ನು ಬ್ರಿಟನ್ ಅಥವಾ ಅಮೆರಿಕಾಗೆ ಕಳುಹಿಸಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ.

ರೇಡಿಯೋ ಆಕ್ಟಿವ್ ಐಸೋಟೋಪ್ ಸೇರಿದಂತೆ ಇತರೆ ಕೆಲವು ವಿಷದ ಅಂಶವನ್ನು ಗುರುತಿಸಲು ಭಾರತದ ಲ್ಯಾಬ್‌ಗಳಲ್ಲಿ ಸಾಧ್ಯವಾಗದ ಕಾರಣ ನಿಖರ ಪರೀಕ್ಷೆಗಾಗಿ ಸುನಂದಾ ಕರುಳಿನ ಮಾದರಿಗಳನ್ನು ವಿದೇಶಿ ಲ್ಯಾಬ್‌ಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಡಿ.29ರಂದು ನೀಡಿರುವ ಅಂತಿಮ ವೈದ್ಯಕೀಯ ವರದಿ 'ಸುನಂದಾ ವಿಷ ಪ್ರಾಶನದಿಂದ ಸಾವನ್ನಪ್ಪಿದ್ದು ಅಸಹಜ ಸಾವು' ಎಂದು ಹೇಳಿತ್ತು. ಆದರೆ ಯಾವ ರೀತಿಯ ವಿಷ ಅವರ ದೇಹದೊಳಗೆ ಸೇರಿದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.

ಸುನಂದಾ ಹೇಗೆ ಮತ್ತು ಯಾವ ಪ್ರಮಾಣದಲ್ಲಿ ವಿಷ ನೀಡಲಾಗಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ನಿಖರ ಪರೀಕ್ಷೆಗಾಗಿ ಅವರ ಕರುಳಿನ ಮಾದರಿಗಳನ್ನು ವಿದೇಶಕ್ಕೆ ಕಳಿಸಲಾಗುವುದು ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಹೇಳಿದ್ದಾರೆ.

SCROLL FOR NEXT