ದೇಶ

ಸಂಧಾನ ಯಶಸ್ವಿ ಕಲ್ಲಿದ್ದಲು ಮುಷ್ಕರ ಹಿಂದಕ್ಕೆ

Lakshmi R

ನವದೆಹಲಿ: ಎರಡು ದಿನಗಳ ಕಾಲ ದೇಶಾದ್ಯಂತ ನಡೆದ ಕೋಲ್ ಇಂಡಿಯಾ ಲಿಮಿಟೆಡ್ ನೌಕರರ ಮುಷ್ಕರ ಹಿಂಪಡೆಯಲಾಗಿದೆ.

ಬುಧವಾರ ತಡರಾತ್ರಿ ದೆಹಲಿಯಲ್ಲಿ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಜತೆ ನಡೆದ ಮಾತುಕತೆ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಕೋಲ್ ಇಂಡಿಯಾವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದಿಲ್ಲ, ಅದರಿಂದ ಬಂಡವಾಳ ಹಿಂಪಡೆಯುವುದಿಲ್ಲ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.

1977ರ ಬಳಿಕ ಅತಿದೊಡ್ಡ ಮುಷ್ಕರ ಎಂದು ಬಣ್ಣಿಸಲಾಗಿದ್ದ ನೌಕರರ ಪ್ರತಿಭಟನೆ ಎರಡು ದಿನಗಳ ಹಿಂದೆ ಆರಂಭವಾಗಿತ್ತು. ಒಟ್ಟಾರೆ ಮುಷ್ಕರದಿಂದ ದೇಶದ ಹೆಚ್ಚಿನ ಕಲ್ಲಿದ್ದಲು ಬ್ಲಾಕ್‌ಗಳಲ್ಲಿ ಕೆಲಸ ಸ್ಥಗಿತಗೊಂಡಿತ್ತು. ಮಾತ್ರವಲ್ಲದೆ ರೂ.300 ಕೋಟಿ ನಷ್ಟವಾಗಿದೆ.

SCROLL FOR NEXT