ದೇಶ

ಹಂದಿ ಜ್ವರಕ್ಕೆ ಎರಡು ಸಾವು: 22 ಪ್ರಕರಣ ದಾಖಲು

Mainashree

ನವದೆಹಲಿ: ದೆಹಲಿಯಲ್ಲಿ ಹಂದಿ ಜ್ವರಕ್ಕೆ ಓರ್ವ ಮಹಿಳೆ ಮೃತಪಟ್ಟಿದ್ದು, ಈ ವರ್ಷ ಹಂದಿ ಜ್ವರಕ್ಕೆ ಮೃತಪಟ್ಟ ಪ್ರಥಮ ಪ್ರಕರಣ ಇದಾಗಿದೆ. ಇದಲ್ಲದೆ ಇನ್ನೂ 9 ಪ್ರಕರಣಗಳು ದಾಖಲಾಗಿವೆ.

ಎಚ್1ಎನ್1ನಿಂದ ನರಳುತ್ತಿದ್ದ 42 ವರ್ಷದ ಮಹಿಳೆ ದೆಹಲಿಯ ಉತ್ತಮ ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಫರಿದಾಬಾದ್‌ನಲ್ಲಿ ಹಂದಿ ಜ್ವರಕ್ಕೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
 
ಹಂದಿ ಜ್ವರಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದ ಮಹಿಳೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾಳೆ ಎಂದು ಆರೋಗ್ಯ ಇಲಾಖೆಯ ವಿಶೇಷ ನಿರ್ದೇಶಕ ಚರಣ್ ಸಿಂಗ್ ಹೇಳಿದ್ದಾರೆ.

ಇದಲ್ಲದೇ ದೆಹಲಿಯಲ್ಲಿ ಇನ್ನು ಹಂದಿ ಜ್ವರ ಸೋಂಕಿನ 9 ಪ್ರಕರಣಗಳು ಪತ್ತೆಯಾಗಿವೆ. ಲೇಡಿ ಹಾರ್ಡಿಗೆ ಆಸ್ಪತ್ರೆಯ ಮಹಿಳಾ ವೈದ್ಯೆ ಸೇರಿದಂತೆ 9 ಮಂದಿ ಹಂದಿ ಜ್ವರ ಸೋಂಕಿಗೆ ನರಳುತ್ತಿರುವುದು ದೃಢಪಟ್ಟಿದೆ. ಈ ಮೂಲಕ ಕಳೆದ ಒಂದು ವಾರದಿಂದ ಇಲ್ಲಿಯವರೆಗೆ ಒಟ್ಟು  22 ಪ್ರಕರಣಗಳು ದಾಖಲಾಗಿವೆ.

ಸೋಂಕಿಗೆ ನರಳುತ್ತಿರುವ ವೈದ್ಯೆಯನ್ನು ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


SCROLL FOR NEXT