ಬಾಲಿವುಡ್ ನಟ ಸಂಜಯ್ ದತ್ (ಸಂಗ್ರಹ ಚಿತ್ರ) 
ದೇಶ

ದತ್ ಪೆರೋಲ್ ವಿಸ್ತರಣೆಗೆ 'ಮಹಾ' ನಕಾರ

ಬಾಲಿವುಡ್ ನಟ ಸಂಜಯ್ ದತ್ ಅವರ ಪೆರೋಲ್ ರಜೆಯನ್ನು ವಿಸ್ತರಿಸುವ ಮನವಿಯನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದೆ.

ಮುಂಬೈ: ಮುಂಬೈ ಸರಣಿ ಸ್ಫೋಟದ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರ ಪೆರೋಲ್ ರಜೆಯನ್ನು ವಿಸ್ತರಿಸುವ ಮನವಿಯನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದೆ.

ಕ್ರಿಸ್‌ಮಸ್ ಮತ್ತು ಹೊಸವರ್ಷಾಚರಣೆಯ ಹಿನ್ನಲೆಯಲ್ಲಿ ಕಳೆದ ಡಿಸೆಂಬರ್ 24ರಂದು ಪೆರೋಲ್ ಮೇಲೆ ಹೊರ ಬಂದಿರುವ ನಟ ಸಂಜಯ್ ದತ್ ಅವರು ತಮ್ಮ ಪೆರೋಲ್ ರಜೆಯನ್ನು ವಿಸ್ತರಿಸುವಂತೆ ಮಾಡಿದ್ದ ಮನವಿಯನ್ನು ಮಹಾರಾಷ್ಟ್ರ ಗೃಹ ಇಲಾಖೆ ತಿರಸ್ಕರಿಸಿದೆ.

ಮುಂಬೈ ಸರಣಿ ಸ್ಫೋಟ ಸಂದರ್ಭದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಆರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್ ದತ್ ಅವರು ಕಳೆದ 2013 ಮೇ ತಿಂಗಳಲ್ಲಿ ಜೈಲು ಪಾಲಾಗಿದ್ದರು. ಪುಣೆಯ ಯರವಾಡ ಜೈಲಿನಲ್ಲಿದ್ದ ದತ್ ಅವರಿಗೆ ಮಹಾರಾಷ್ಟ್ರ ಸರ್ಕಾರ ಪದೇ ಪದೇ ಪೆರೋಲ್ ರಜೆ ನೀಡುವ ಮೂಲಕ ವಿವಾದಕ್ಕೀಡಾಗಿತ್ತು. ಸಂಜಯ್ ದತ್ ಅವರಿಗೆ ನೀಡಿರುವ ವಿಶೇಷ ಸವಲತ್ತುಗಳನ್ನು ಪ್ರಶ್ನಿಸಿದ್ದ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ಮಹಾರಾಷ್ಟ್ರ ಸರ್ಕಾರದ ವಿವರ ಕೇಳಿತ್ತು.

ಕುಟುಂಬದೊಂದಿಗೆ ಕ್ರಿಸ್‌ಮಸ್ ಮತ್ತು ಹೊಸವರ್ಷಾಚರಣೆ ಆಚರಿಸಿಕೊಳ್ಳುವ ನೆಪವೊಡ್ಡಿ ನಟ ಸಂಜಯ್ ದತ್ ಅವರು ಕಳೆದ ಡಿಸೆಂಬರ್ 24ರಂದು 14 ದಿನಗಳ ಕಾಲ ಪೆರೋಲ್ ರಜೆ ಪಡೆದಿದ್ದರು. ಅಲ್ಲದೆ ತಮ್ಮ ಪೆರೋಲ್ ಅನ್ನು ವಿಸ್ತರಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರದ ಬಳಿ ಮನವಿ ಮಾಡಿದ್ದರು. ಆದರೆ ಇದೀಗ ಅವರ ಪೆರೋಲ್ ಮನವಿಯನ್ನು ಸರ್ಕಾರ ತಿರಸ್ಕರಿಸಿದ್ದು, ಜನವರಿ 8ರಂದು ಅವರ ರಜೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಇಂದು ಸಂಜಯ್ ದತ್ ಪುಣೆಯ ಯರವಾಡ ಜೈಲಿಗೆ ವಾಪಸ್ಸಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲವ್ ಅಲ್ಲ ಅದು 'ಬಲವಂತದ ಮದುವೆ': ಕಾಂಗ್ರೆಸ್‌ ಜತೆ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ದೇವೇಗೌಡ!

'ಅಶ್ಲೀಲ ಅಲ್ಲ, ಹಾಡನ್ನು Rewrite ಮಾಡ್ತೇನೆ': ನಿರ್ದೇಶಕ Prem ಕ್ಷಮೆಯಾಚನೆ! ನಟಿ ನೋರಾ, ಸಾಹಿತಿ ಅಲಂ ಬಗ್ಗೆಯೂ ಕಿಡಿ! Video

'ಇದ್ದಕ್ಕಿದ್ದಂತೆ 'Beep' ಶಬ್ದ': 'ರಂಗಸ್ಥಳಂ' ನಟನಿಂದ ಅನುಚಿತ ವರ್ತನೆ? ಕೊನೆಗೂ ನಟಿ Sreeleela ಸ್ಪಷ್ಟನೆ

ಪಶ್ಚಿಮ ಬಂಗಾಳ ಚುನಾವಣೆ: 74 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ ದೀದಿ; ಭುಗಿಲೆದ್ದ ಅಸಮಾಧಾನ

News wrap 18-03-2026 | ಸರ್ಕಾರಕ್ಕೆ ಹೊರಟ್ಟಿ ಗಡುವು; ವಿಧಾನಸಭೆಯಲ್ಲಿ ಮರ್ಯಾದಾ ಹತ್ಯೆ ನಿಷೇಧ ಮಸೂದೆ ಮಂಡನೆ; 150 LPG ಸಿಲಿಂಡರ್ ವಶಕ್ಕೆ

SCROLL FOR NEXT