ದೇಶ

ಹೆಬ್ಡೋ ವಿಡಂಬನೆಗೆ ಗುರಿಯಾಗದವರೇ ಇಲ್ಲ

ಪ್ಯಾರಿಸ್‌ನಲ್ಲಿ ಬುಧವಾರ ಉಗ್ರರ ದಾಳಿಗೆ ಗುರಿಯಾದ ಚಾರ್ಲಿ ಹೆಬ್ಡೋ ದೊಡ್ಡ...

ಲಂಡನ್: ಪ್ಯಾರಿಸ್‌ನಲ್ಲಿ ಬುಧವಾರ ಉಗ್ರರ ದಾಳಿಗೆ ಗುರಿಯಾದ ಚಾರ್ಲಿ ಹೆಬ್ಡೋ ದೊಡ್ಡ ಪತ್ರಿಕೆಯೇನೂ ಅಲ್ಲ. ವ್ಯಂಗ್ಯ ಚಿತ್ರಗಳು ಮತ್ತು ವಿಡಂಬನೆಯಿಂದಲೇ ಜನಪ್ರಿಯವಾದ ಸಣ್ಣ ಪತ್ರಿಕೆ. ಆದರೆ, ಇದು ತನ್ನ ವಿಡಂಬನೆಗಾಗಿಯೇ ಪ್ರತಿ ಬಾರಿಯೂ ಸುದ್ಧಿಯಾಗುತ್ತಿತ್ತು.

ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ವ್ಯಂಗ್ಯ ಚಿತ್ರಗಳಿಗೆ ಆಹಾರವಾಗದವರು ಅಪರೂಪ. ರಾಜಕಾರಣಿಗಳು, ಧರ್ಮ, ಗಣ್ಯರು ಯಾರನ್ನೂ ಈ ಪತ್ರಿಕೆ ವಿಡಂಬನೆ ಮಾಡದೇ ಬಿಡುತ್ತಿರಲಿಲ್ಲ. ಎಡಪಂಥೀಯ ಪತ್ರಿಕೆಯಾಗಿದ್ದ ಇದು ಬಲಪಂಥೀಯ ಚಿಂತನೆಗಳನ್ನು ಆಗಾಗ ವಿಡಂಬನೆ ಮಾಡುತ್ತಿತ್ತು. ಕ್ರಿಶ್ಚಿಯನ್, ಇಸ್ಲಾಂ ಧರ್ಮದ ಕೆಲವು ಕಟುನಿಯಮಗಳನ್ನು ವಿಡಂಬನೆ ಮೂಲಕವೇ ಪ್ರಶ್ನಿಸುತ್ತಿತ್ತು.

ಡೆನ್ಮಾರ್ಕ್‌ನ ಜೈಲಾಂಡ್ಸ್ ಪೋಸ್ಟನ್ ಪತ್ರಿಕೆ ಪ್ರಕಟಿಸಿದ್ದ ಪ್ರವಾದಿ ಮೊಹಮ್ಮದರ ಕುರಿತ 12 ಕಾರ್ಟೂನ್‌ಗಳ ಸರಣಿಯನ್ನು ಫೆಬ್ರವರಿ 2006ರಲ್ಲಿ ಹೆಬ್ಡೋ ಪ್ರಕಟಿಸಿತ್ತು. ಇದು ಫ್ರಾನ್ಸ್‌ನಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು.

ಪ್ರವಾದಿ ಮೊಹಮ್ಮದರ ಚಿತ್ರ ಬಿಡಿಸುವುದೇ ಇಸ್ಲಾಂನಲ್ಲಿ ನಿಷಿದ್ಧ. ಈ ಹಿನ್ನಲೆಯಲ್ಲಿ ಫ್ರಾನ್ಸ್‌ನ ಮುಸ್ಲಿಂ ಧರ್ಮಾನುಯಾಯಿಗಳ ಸಮಿತಿ ಮತ್ತು ಪ್ಯಾರಿಸ್ ಮತ್ತು ಲೈಯಾನ್‌ನ ಮಸೀದಿಗಳ ಸಂಘಟನೆ ಇದಕ್ಕಾಗಿ ಪತ್ರಿಕೆ ವಿರುದ್ಧ ನ್ಯಾಯಾಲಯದ ಕಟಕಟೆಯೇರಿತ್ತು.

ಆದರೆ, ಪತ್ರಿಕೆ ಪ್ರಕಟಿಸಿದ್ದ ವ್ಯಂಗ ಚಿತ್ರಗಳು ಫ್ರಾನ್ಸ್‌ನ ಮುಸ್ಲಿಂ ಸಮುದಾಯದ ಪಾಲಿಗೆ ಆಕ್ಷೇಪಾರ್ಹ ಎಂದು ಸಾಬೀತುಪಡಿಸುವಲ್ಲಿ ಆ ಸಂಘಟನೆಗಳು ವಿಫಲವಾಗಿದ್ದವು. ಈ ವೈಫಲ್ಯವೇ ಮುಂದೆ ಭಾರಿ ಅನಾಹುತ ಹುಟ್ಟುಹಾಕಿತು.

ಪ್ರವಾದಿ ಮೊಹಮ್ಮದರ ಚಿತ್ರ ಪ್ರಕಟಿಸುವ ವಿಚಾರ ಫ್ರಾನ್ಸ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದ್ದಂತೆ ಸಲ್ಮಾನ್ ರಶ್ದಿ, ಬರ್ನಾಡ್ ಹೆನ್ರಿ ಲೆವ್ಲಿ ಸೇರಿದಂತೆ 12 ಪ್ರಮುಖ ಲೇಖಕರು ಪತ್ರಿಕೆಯಲ್ಲಿ ಲೇಖನಗಳನ್ನು ಬರೆದರು. ಅದರಲ್ಲಿ ಇಸ್ಲಾಂನ ಜತೆಗೆ ತಳಕು ಹಾಕಿಕೊಂಡಿರುವ ಭಯವಾದದ ಕುರಿತು ಹೇಳಿಕೊಂಡರು.

ಈ ರೀತಿಯ ಲೇಖನಗಳಿಂದ ಪತ್ರಿಕೆ ಇನ್ನಷ್ಟು ವಿವಾದಕ್ಕೆ ಗುರಿಯಾಯಿತು. ಪತ್ರಿಕೆಯ ಕೆಲವು ನೌಕರರಿಗೆ ಪೊಲೀಸರ ಭದ್ರತೆ ಒದಗಿಸುವ ಪರಿಸ್ಥಿತಿ ಬಂತು. ಆದರೆ, ಇದರಿಂದ ಪತ್ರಿಕೆಯ ಸಿಬ್ಬಂದಿ ಸುಮ್ಮನಾಗಲಿಲ್ಲ. ಬದಲಾಗಿ ಇನ್ನಷ್ಟು ಹೆಚ್ಚು ಆಕ್ರಮಣಕಾರಿಯಾದರು.

2011ರಲ್ಲಿ ಪತ್ರಿಕೆಯು ಪ್ರವಾದಿ ಮೊಹಮ್ಮದರನ್ನು ತನ್ನ ಮುಖ್ಯ ಸಂಪಾದಕರಾಗಿ ಬಿಂಬಿಸಿತು. ಈ ವೇಳೆ ಕೆಲವು ವ್ಯಕ್ತಿಗಳು ಪತ್ರಿಕೆಯ ಮೇಲೆ ಬಾಂಬ್ ಎಸೆದರು, ವೆಬ್‌ಸೈಟ್ ಹ್ಯಾಕ್ ಮಾಡಿದರು. ಆಗ ಪತ್ರಿಕೆಯ ಮುಖ್ಯ ಸಂಪಾದಕ ಹೇಳಿದ್ದು ಒಂದೇ ಮಾತು.

ಇಸ್ಲಾಂ ಅಥವಾ ಇಸ್ಲಾಂವಾದದ ಪರಿಣಾಮಗಳ ಹೊರತಾಗಿ ನಾವು ಫ್ರಾನ್ಸ್‌ನಲ್ಲಿ ಎಲ್ಲ ವಿಷಯಗಳ ಕುರಿತು ವಿಡಂಬನೆ ಮಾಡಬಹುದು, ಎಲ್ಲ ವಿಚಾರಗಳ ಕುರಿತು ಮಾತನಾಡಬಹುದು ಎನ್ನುವುದು ಮುಜುಗರದ ವಿಚಾರ.

ಈ ಘಟನೆ ಬಳಿಕ ಪತ್ರಿಕೆ ಇಸ್ಲಾಂ ವಿರೋಧಿಯಾಗಿಯೇ ಬಿಂಬಿತವಾಯಿತು. ಇದೇ ಸಮಯದಲ್ಲಿ ಪತ್ರಿಕೆ ಮತ್ತೊಂದು ವಿವಾದಾತ್ಮಕ ಸಂಚಿಕೆಯನ್ನು ಬಿಡುಗಡೆ ಮಾಡಿತು. ಆ ಸಂಚಿಕೆಯ ಮುಖಪುಟದಲ್ಲಿ ಮುಸ್ಲಿಂ ಪೋಷಾಕು ತೊಟ್ಟ ವ್ಯಕ್ತಿಯೊಬ್ಬ ಚಾರ್ಲಿ ಹೆಬ್ಡೋ ವ್ಯಂಗ್ಯ ಚಿತ್ರಕಾರನಿಗೆ ಮುತ್ತು ನೀಡುತ್ತಿರುವ ವ್ಯಂಗ್ಯ ಪ್ರಕಟಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT