ದೇಶ

ರಾಜಪಕ್ಸೆಗೆ ಸಂಕಷ್ಟ ಶುರು

ಕೊಲೊಂಬೋ: 10 ವರ್ಷಗಳ ಕಾಲ ಶ್ರೀಲಂಕಾದ ಅಧ್ಯಕ್ಷರಾಗಿ ಮೆರೆದಿದ್ದ ಮಹಿಂದಾ ರಾಜಪಕ್ಸೆಗೆ ಸಂಕಷ್ಟಗಳು ಶುರುವಾಗಿವೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಅವರ ವಿರುದ್ಧ ಒಂದೊಂದೇ ಆರೋಪಗಳು ಕೇಳಿ ಬರತೊಡಗಿವೆ.

ಚುನಾವಣೆ ಮತ ಎಣಿಕೆ ನಡೆಯುತ್ತಿದ್ದಾಗ, ತಾನು ಸೋಲುತ್ತಿದ್ದೇನೆ ಎನ್ನುವ ಸುಳಿವು ಸಿಗುತ್ತಿದ್ದಂತೆ ಹೆಚ್ಚಿನ ಸೇವೆ ನಿಯೋಜಿಸುವಂತೆ ರಾಜಪಕ್ಸೆ ಅವರು ಸೇನಾ ಮುಖ್ಯಸ್ಥರ ಮೇಲೆ ಒತ್ತಡ ತಂದಿದ್ದರು ಎಂಬ ವಿಚಾರ ಈಗ ಬಹಿರಂಗವಾಗಿದೆ.

ರಾಜಪಕ್ಸೆ ಅವರು ಸೇನಾ ಮುಖ್ಯಸ್ಥರಿಗೆ ಒತ್ತಡ ತಂದಾಗ, ತಾನು ಯಾವುದೇ ಕಾನೂನುಬಾಹಿರ ಕ್ರಮ ಕೈಗೊಳ್ಳಲಾರೆ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದರು ಎಂದು ಹೊಸ ಸರ್ಕಾರದ ವಕ್ತಾರ ತಿಳಿಸಿದ್ದಾರೆ.

ಮೊದಲ ಭೇಟಿ ಭಾರತಕ್ಕೆ: ಶ್ರೀಲಂಕಾದ ನೂತನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಮೊದಲ ವಿದೇಶ ಭೇಟಿ ಎಲ್ಲಿಗೆ ಗೊತ್ತೇ? ಭಾರತಕ್ಕೆ. ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರು ಮೊದಲ ವಿದೇಶ ಭೇಟಿಗೆ ನಮ್ಮ ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಸದ್ಭಾವನೆಯ ಸಂಕೇತವಾಗಿ ಲಂಕಾದಲ್ಲಿ ಬಂಧಿತರಾಗಿರುವ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

SCROLL FOR NEXT