ಕೊಲ್ಕತಾ: ಸ್ವಾತಂತ್ರ್ಯ ಹೋರಾಟಗಾರ ಸುಭಾಶ್ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿಲ್ಲ. ಅವರನ್ನು ಸೋವಿಯತ್‌ನ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ಕೊಲೆ ಮಾಡಿದ್ದರು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿರಿಯಾದಲ್ಲಿ ಬೋಸ್‌ರನ್ನು ಸೆರೆಹಿಡಿದ ಸ್ಟಾಲಿನ್ ಅಲ್ಲೇ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಹೊರ ಹಾಕಿದ ಸ್ವಾಮಿ, ರಹಸ್ಯ ಪಟ್ಟಿಲ್ಲಿರುವ ಸತ್ಯವನ್ನು ಹೊರತರುವಂತೆಯೂ ಆಗ್ರಹಿಸಿದರು. ಈ ಮೂಲಕವಾದರೂ ಬೋಸ್ ಸಾವಿನ ಹಿಂದಿನ ಸತ್ಯ ಜಗತ್ತಿಗೆ ತಿಳಿಯಲಿ ಎಂದರು. ವಿಷ್ಯ ಬಹಿರಂಗಗೊಳಿಸಿದರೆ, ಬ್ರಿಟನ್-ರಷ್ಯಾ ಸಂಬಂಧಕ್ಕೆ ಕುತ್ತು ಬರಬಹುದಾದರೂ, ಈ ಬಗ್ಗೆ ಪ್ರಧಾನಿ ಜತೆ ಮಾತನಾಡುವುದಾಗಿ ಹೇಳಿದರು.