ದೇಶ

ವಿದ್ಯಾರ್ಥಿನಿಯರ ಅಂಡಾಣು ಮಾರಾಟ!

ಬೀಜಿಂಗ್: ನಮ್ಮಲ್ಲಿ ಕೆಲ ಕಾಲೇಜು ಯುವಕರು 'ವಿಕಿ ಡೋನರ್‌' ಮಾದರಿಯಲ್ಲಿ ವೀರ್ಯ ಮಾರಿ ದುಡ್ಡು ಮಾಡುವುದು ಗೊತ್ತೇ ಇದೆ. ಆದರೆ, ವಿದ್ಯಾರ್ಥಿನಿಯರ ಅಂಡಾಣು ಮಾರಾಟ ದಂಧೆಯ ಬಗ್ಗೆ ಗೊತ್ತಾ?

ಮಕ್ಕಳಿಗಾಗಿ ಹಪಹಪಿಸುವ ದಂಪತಿಯಿಂದ ದುಡ್ಡು ಪಡೆದು ಸುಲಭ ದಾರಿಯಲ್ಲಿ ಹಣ ಮಾಡುವ ದಂಧೆ ಇದು. ಅಂದಹಾಗೆ, ಈ ವ್ಯವಸ್ಥಿತ ದಂಥೆ ನಡೆಯುತ್ತಿರುವುದು ಭಾರತದಲ್ಲಲ್ಲ, ಪಕ್ಕದ ಚೀನಾ ದೇಶದಲ್ಲಿ ಆಘಾತಕಾರಿ ವಿಚಾರವೇನೆಂದರೆ ರೀತಿ ಅಂಡಾಣು ಮಾರಾಟ ಮಾಡುತ್ತಿರುವವರಲ್ಲಿ ಹೆಚ್ಚನವರು ಹೈಸ್ಕೂಲ್ ವಿದ್ಯಾರ್ಥಿನಿಯರು.

ಇದಕ್ಕಾಗಿ ಕೈತುಂಬಾ ಹಣಗಳಿಸುತ್ತಿದ್ದಾರೆ. ಅಂಡಾಣು ಸಂಗ್ರಹಕ್ಕೆ ಹೆಚ್ಚಾಗಿ 20 ವರ್ಷದ ಅಥವಾ ಒಳಗಿನ ವಯಸ್ಸಿನ ಯುವತಿಯರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಗೃಹಿಣಿಯರಿಗಿಂತ ಈ ವಯಸ್ಸಿನವರ ಅಂಡಾಣುವಿನಲ್ಲಿ ಸತ್ವ ಹೆಚ್ಚಿರುವುದೇ ಇದಕ್ಕೆ ಮುಖ್ಯ ಕಾರಣ.

ಅಂಡಾಣು ಸಂಗ್ರಹಿಸಲು ಔಷಧ ಚಿಕಿತ್ಸೆ ಜತೆಗೆ ಸಣ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಆದರೆ, ಒಬ್ಬ ಯುವತಿ ಪ್ರತಿ ಬಾರಿ 20ಕ್ಕಿಂತ ಹೆಚ್ಚು ಅಂಡಾಣು ನೀಡಿದಲ್ಲಿ ಆಕೆಯ ಅಂಡಾಣು ಹಿಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲವೇ ಅಧಿಕ ರಕ್ತಸ್ರಾವ ಉಂಟಾಗಿ ಪ್ರಾಣಕ್ಕೇ ಸಂಚಕಾರ ಉಂಟಾಗಬಹುದು.

SCROLL FOR NEXT