ಏರ್‌ಏಷ್ಯಾ ವಿಮಾನದ ಅವಶೇಷಗಳನ್ನು ಸಾಗಿಸುತ್ತಿರುವ ನೌಕಾದಳದ ಸಿಬ್ಬಂದಿ (ಸಂಗ್ರಹ ಚಿತ್ರ) 
ದೇಶ

ವಾಯು ಒತ್ತಡದಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟ..!

ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟಗೊಂಡಿರಬಹುದು ಎಂದು..

ಜಕಾರ್ತ: ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟಗೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಮಾನವು ಸಮುದ್ರದಲ್ಲಿ ಬೀಳುವುದಕ್ಕೂ ಮೊದಲೇ ಆಗಸದಲ್ಲೇ ಸ್ಫೋಟಗೊಂಡಿದೆ. ವಿಮಾನದಲ್ಲಿ ವಾಯು ಒತ್ತಡ ತೀವ್ರ ಪ್ರಮಾಣದಲ್ಲಿ ಏರುಪೇರಾಗಿದ್ದರಿಂದ ವಿಮಾನ ಸ್ಫೋಟಗೊಂಡಿರಬಹುದು ಎಂದು ಹಿರಿಯ ತನಿಖಾಧಿಕಾರಿ ಸುಪ್ರಿಯದಿ ಹೇಳಿದ್ದಾರೆ. ರಾಷ್ಟ್ರೀಯ ಶೋಧನಾ ಮತ್ತು ರಕ್ಷಣಾ ಏಜೆನ್ಸಿಯ ಸಂಯೋಜಕರಾಗಿರುವ ಸುಪ್ರಿಯದಿ ಅವರು ಹೇಳಿರುವಂತೆ, 'ನನ್ನ ಸಂಶೋಧನೆಗಳ ಪ್ರಕಾರ ಮತ್ತು ವಿಮಾನದ ಅವಶೇಷಶಗಳನ್ನು ಪರೀಕ್ಷಿಸಿದಾಗ ವಿಮಾನವು ತೀವ್ರ ವಾಯು ಒತ್ತಡದಿಂದಾಗಿ ಸ್ಫೋಟಗೊಂಡಿರಬಹುದು. ಆ ಬಳಿಕ ಸಮುದ್ರಕ್ಕೆ ಬಿದ್ದಿದೆ. ವಿಮಾನದ ಎಡಭಾಗದ ಲೋಹದ ತಡೆಗೋಡೆಯಲ್ಲಿ ಉಂಟಾದ ಬಿರುಕು ವಿಮಾನದಲ್ಲಿ ತೀವ್ರ ವಾಯು ಒತ್ತಡ ಹೆಚ್ಚಾಗುವಂತೆ ಮಾಡಿದೆ. ಹೀಗಾಗಿ ವಿಮಾನ ಸ್ಫೋಟಗೊಂಡಿರಬಹುದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇಂದು ಬೆಳಗ್ಗೆ ಏರ್‌ಏಷ್ಯಾ ವಿಮಾನದ ಎರಡೂ ಬ್ಲಾಕ್‌ಬಾಕ್ಸ್ ಗಳ ಪತ್ತೆಯಾಗಿದ್ದು, ವಿಮಾನ ಪತನಗೊಳ್ಳುವ ಮುನ್ನ ಪೈಲಟ್ ಆಡಿದ ಮಾತುಗಳನ್ನು ಆಧರಿಸಿ ವಿಮಾನ ಹೇಗೆ ಪತನಗೊಂಡಿತು ಎನ್ನುವುದರ ಮಾಹಿತಿ ದೊರೆಯಲಿದೆ. ಈಗಾಗಲೇ ಎರಡೂ ಬ್ಲಾಕ್‌ಬಾಕ್ಸ್ ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ತಜ್ಞರು ಬ್ಲಾಕ್‌ಬಾಕ್ಸ್ ನಲ್ಲಿ ರೆಕಾರ್ಡ್ ಆಗಿರುವ ಮಾಹಿತಿಗಳನ್ನು ಡಿಕೋಡ್ ಮಾಡುವ ಕಾರ್ಯದಲ್ಲಿ ತೊಡಗಲಿದ್ದಾರೆ.

ಕಳೆದ ಡಿಸೆಂಬರ್ 28ರಂದು ಸುರಬಯಾ ವಿಮಾನ ನಿಲ್ದಾಣದಿಂದ ಸಿಂಗಾಪುರದತ್ತ ಪ್ರಯಾಣ ಬೆಳೆಸಿದ್ದ ಏರ್‌ಏಷ್ಯಾ ವಿಮಾನ ಟೇಕ್‌ಆಫ್ ಆದ ಕೆಲವೇ ಗಂಟೆಗಳಲ್ಲಿ ಪತನಗೊಂಡು, ಜಾವಾ ಸಮುದ್ರದಲ್ಲಿ ಬಿದ್ದಿತ್ತು. ಇಂದು ಬೆಳಗ್ಗೆ 7.30ರ ವೇಳೆಯಲ್ಲಿ ವಿಮಾನದ ಬ್ಲಾಕ್‌ಬಾಕ್ಸ್ ಅನ್ನು ನೀರಿನಿಂದ ಹೊರತೆಗೆಯಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT