ಬಿಜೆಪಿ ನಾಯಕ ಶ್ಯಾಮಲ್ ಗೋಸ್ವಾಮಿ 
ದೇಶ

ಪ್ರತಿ ಹಿಂದೂ ಮಹಿಳೆ 5 ಮಕ್ಕಳನ್ನು ಹೆರಬೇಕು

ಬಿರ್‌ಭೂಮ್: ಹಿಂದೂ ಧರ್ಮ ರಕ್ಷಣೆಗಾಗಿ ಹಿಂದು ಮಹಿಳೆಯು 4 ಮಕ್ಕಳನ್ನು ಹೆರಬೇಕು ಎಂಬ ಬಿಜೆಪಿ ನಾಯಕನ ಹೇಳಿಕೆ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬೆನ್ನಲ್ಲೆ ಮತ್ತೊಬ್ಬ ಬಿಜೆಪಿ ನಾಯಕ, ಹಿಂದೂ ಧರ್ಮ ರಕ್ಷಣೆಗಾಗಿ ಪ್ರತಿ ಹಿಂದು ಮಹಿಳೆಯು 5 ಮಕ್ಕಳನ್ನು ಹೆರಬೇಕು ಎಂಬ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.

ಬಿಜೆಪಿ ಸಂಸದ ಸಾಕ್ಷಿಮಹರಾಜ್ ಇತ್ತೀಚೆಗೆಷ್ಟೇ ಹಿಂದೂ ಧರ್ಮ ರಕ್ಷಣೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಾರಿ ಚರ್ಚೆಗೆ ಗ್ರಾಸವಾಗಿದ್ದರು. ಹಿಂದೂ ಧರ್ಮ ರಕ್ಷಣೆ ಮಾಡುವ ಸಲುವಾಗಿ ಪ್ರತಿ ಹಿಂದು ಮಹಿಳೆಯರು ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಬಿಜೆಪಿ ಕೆಂಡಾಮಂಡಲವಾಗಿತ್ತು. ಈ ಸಂಬಂಧ ಬಿಜೆಪಿಯು ಸಾಕ್ಷಿ ಮಹಾರಾಜ್‌ಗೆ ಶೋಕಾಸ್ ನೊಟೀಸ್ ಸಹ ನೀಡಿತ್ತು.

ಇದೀಗ ಈ ಹೇಳಿಕೆ ಮಾಸುವ ಮುನ್ನವೇ, ಬಂಗಾಳದ ಬಿಜೆಪಿ ನಾಯಕ ಶ್ಯಾಮಲ್ ಗೋಸ್ವಾಮಿ, ಹಿಂದೂ ಧರ್ಮ ಪಾಲನೆಗೆ ಪ್ರತಿ ಹಿಂದು ಮಹಿಳೆಯು ಐದು ಮಕ್ಕಳನ್ನು ಹೆರಬೇಕು ಎಂದು ವಿವಾದದ ಬಾಂಬ್ ಸ್ಫೋಟಿಸಿರುವುದು ಸಂಚಲನಕ್ಕೆ ಕಾರಣವಾಗಿದೆ.

ಇತ್ತೀಚಿನ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅವನತಿಯ ಹಾದಿ ಹಿಡಿದಿದ್ದು, ಭವಿಷ್ಯದಲ್ಲಿ ಹಿಂದು ಧರ್ಮ ಪಾಲನೆ ಮಾಡಬೇಕಾದರೆ, ಹಿಂದುಗಳ ಸಂಖ್ಯೆ ಹೆಚ್ಚಾಗುವುದು ಅನಿವಾರ್ಯವಾಗಿದೆ. ಸನಾತನ ಧರ್ಮದ ಉಳಿವಿಗಾಗಿ ಪ್ರತಿ ಹಿಂದೂ ಮಹಿಳೆಯ 5 ಮಕ್ಕಳನ್ನು ಹೆರಬೇಕು ಎಂದು ಗೋಸ್ವಾಮಿ ಸಾರ್ವಜನಿಕ ಭಾಷಣದ ವೇಳೆ ಹೇಳಿರುವುದು ಅಚ್ಚರಿ ಮೂಡಿಸಿದೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT