ನವದೆಹಲಿ: ಕನಿಷ್ಠ ಸಂಸತ್ತಿನ ಬಜೆಟ್ ಅಧಿವೇಶನದವರೆಗೆ ಸರ್ಕಾರ ಮಹತ್ವದ ಕಾನೂನು ತಿದ್ದುಪಡಿಗಳಿಗೆ ಸುಗ್ರೀವಾಜ್ಞೆ ಹಾದಿ ಹಿಡಿಯದಿರಲು ನಿರ್ಧರಿಸಿದೆ.
ಸುಗ್ರೀವಾಜ್ಞೆಗೆ ಸಂಬಂಧಿಸಿ ರಾಷ್ಟ್ರಪತಿ ಮುಖರ್ಜಿ ಕೆಲ ಸಚಿವಾಲಯಗಳನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅದರಂತ ಸಚಿವ ಸಂಪುಟ ಒಪ್ಪಿಗೆ ನೀಡಿದ ಎರಡು ಸುಗ್ರೀವಾಜ್ಞೆಗಳನ್ನು ಸದ್ಯ ಜಾರಿಗೊಳಿಸದಿರಲು ನಿರ್ಧರಿಸಲಾಗಿದೆ. ಅವನ್ನು ವಿಧೇಯಕವಾಗಿ ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯಸಭೆಯಲ್ಲಿ ಸಂಖ್ಯಾ ಬಲದ ಕೊರತೆ ಹೊಂದಿರುವ ಎನ್‌ಡಿಎ, 7 ತಿಂಗಳಲ್ಲಿ 10 ಸುಗ್ರೀವಾಜ್ಞೆ ಹೊರಡಿಸಿದೆ.