ಮುಂಬೈ: ನೀತಿ ಪರಿಷ್ಕರಣೆ ಮುನ್ನವೇ ಆರ್‌ಬಿಐ ತನ್ನ ಪ್ರಧಾನ ಬಡ್ಡಿ ದರಗಳಲ್ಲಿ 25 ಮೂಲಾಂಶಗಳ ಕಡಿತವನ್ನು ಘೋಷಿಸಿದ್ದು, ಸಾಲದ ಬಡ್ಡಿ ದರಗಳು ಇಳಿಕೆಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಸಂಕ್ರಾಂತಿ ಹಬ್ಬದ ಶುಭ ಕೋರಿ ಮಾತನಾಡಿರುವ ಆರ್‌ಬಿಐ ಗವರ್ನರ್ ರಘುರಾಂ ರಾಜನ್ ಅವರು, ಜನತೆಗೆ ಸಂಕ್ರಾಂತಿಯ ಉಡುಗೊರೆಯೊಂದಿಗೆ ಅಚ್ಚರಿಯನ್ನು ನೀಡಿದ್ದಾರೆ. ಹಲವು ದಿನಗಳಿಂದ ರೆಪೋದರವನ್ನು ಆರ್‌ಬಿಐ ಇಳಿಕೆ ಮಾಡುವ ಸಾಧ್ಯತೆ ಎಂಬ ಊಹಾಪೋಹಗಳಿಗೆ ಇಂದು ತೆರೆ ಎಳೆದಿರುವ ಅವರು, ಭಾರತೀಯ ಅರ್ಥ ವ್ಯವಸ್ಥೆ ಕುಸಿಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದರಂತೆ ಭಾರತೀಯ ರಿಸರ್ವ್ ಬ್ಯಾಂಕ್‌ನ ರೆಪೋ ದರವು ಶೇ.8 ಇದ್ದದ್ದು, ಈಗ ಶೇ.7.75 ಆಗಲಿದೆ. ರಿವರ್ಸ್ ರೆಪೋ ದರವು ಶೇ.6.75 ಆಗಲಿದೆ.
ಇದರಂತೆ ಠೇವಣಿಯ ಬಡ್ಡಿದರಗಳು ಕಡಿಮೆಯಾಗಲಿದ್ದು, ಸಾಲ ತೆಗೆದುಕೊಂಡವರಿಗೆ ಶೇ.025 ರವರೆಗೂ ಬಡ್ಡಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.