ಪೆಟ್ರೋಲ್ ದರ ಇಳಿಕೆ (ಸಂಗ್ರಹ ಚಿತ್ರ) 
ದೇಶ

ಪೆಟ್ರೋಲ್ 2.42, ಡೀಸೆಲ್ 2.25 ರುಪಾಯಿ ಇಳಿಕೆ

ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 2.42 ಮತ್ತು ಡೀಸೆಲ್ ದರದಲ್ಲಿ 2.25 ರುಪಾಯಿ ಇಳಿಕೆ ಮಾಡಲಾಗಿದೆ.

ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 2.42 ಮತ್ತು ಡೀಸೆಲ್ ದರದಲ್ಲಿ 2.25 ರುಪಾಯಿ ಇಳಿಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ತೀವ್ರ ಇಳಿಕೆಯಾದ ಹಿನ್ನಲೆಯಲ್ಲಿ ತೈಲೋತ್ಪನ್ನ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರಲ್ಲಿ ಇಳಿಕೆ ಮಾಡಿವೆ. ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಯಾಗಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ದಿನೇ ದಿನೇ ಇಳಿಕೆಯತ್ತ ಸಾಗುತ್ತಿದ್ದು,  ಪ್ರತೀ ಬ್ಯಾರೆಲ್ ದರ 45 ಡಾಲರ್‌ಗಳಿಗಿಂತಲೂ ಕಡಿಮೆಯಾಗಿತ್ತು.

ಇನ್ನು ಕಳೆದ ಜೂನ್ ತಿಂಗಳಿನಿಂದಲೂ ಕಚ್ಛಾ ತೈಲದ ದರ ಇಳಿಕೆಯತ್ತ ಮುಖ ಮಾಡಿದ್ದು, ವಿಶ್ವದ ನಾನಾ ದೇಶಗಳು ತಾವಾಗಿಯೇ ಕಚ್ಛಾತೈಲ ಉತ್ಪಾದನೆಯಲ್ಲಿ ತೊಡಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಗಿಂತಲೂ ಉತ್ಪಾದನೆ ಹೆಚ್ಚಾಗ ತೊಡಗಿದೆ. ಹೀಗಾಗಿಯೇ ಕಚ್ಛಾ ತೈಲ ದರ ಇಳಿಕೆಯತ್ತ ಮುಖ ಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಗೆ ಆಕ್ಷೇಪ: ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!

ಸರ್ಕಾರಿ ಗೌರವಗಳೊಂದಿಗೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ: 9 ಮಂದಿ ಬಂಧನ; ಕೊಲೆಗೆ ನಿಜವಾದ ಕಾರಣ ಬಿಚ್ಚಿಟ್ಟ ಪೊಲೀಸರು

ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು; ವಿಪರೀತ ಮೂಡ್ ಸ್ವಿಂಗ್ಸ್: 'ಆ' ದಿನಗಳ ಭೀಕರತೆ ಬಿಚ್ಚಿಟ್ಟ ನಟಿ ಐಶ್ವರ್ಯಾ!

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಾಗಿರುವುದಿಲ್ಲ'; ಅಮೆರಿಕದ ಕ್ರಮ 'ಕಡಲ್ಗಳ್ಳತನ'ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

SCROLL FOR NEXT