ದೇಶ

ಉಗ್ರರ ವಿರುದ್ಧ ಕಾರ್ಯಾಚರಣೆ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿಷೇಧ?

ನವದೆಹಲಿ: ಇನ್ನು ಮುಂದೆ ಮುಂಬೈ ದಾಳಿಯಂಥ 'ಉಗ್ರ ಘಟನೆಗಳನ್ನು ನೇರ ಪ್ರಸಾರ ಮಾಡುವಂತಿಲ್ಲ.

ಮುಂಬೈ ದಾಳಿ ವೇಳೆ ಮಾಧ್ಯಮಗಳಲ್ಲಿ ಬಂದ ನೇರ ಪ್ರಸಾರವೇ ಅದರ ಪರಿಣಾಮ ಹೆಚ್ಚಲು ಕಾರಣ ಎಂಬ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ಬಂಧವೇರಲು ಮುಂದಾಗಿದೆ. ಈ ಸಂಬಂಧ ಸ್ವತಃ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರೇ ಸುಳಿವು ನೀಡಿದ್ದಾರೆ.

ಕಾರ್ಗಿಲ್ ಯುದ್ಧದ ವೇಳೆ ಮತ್ತು 26/11ರ ದಾಳಿ ವೇಳೆ ಮಾಧ್ಯಮಗಳು ಅಲ್ಲಿನ ಕಾರ್ಯಾಚರಣೆಯನ್ನು ಪ್ರಸಾರ ಮಾಡಿದ್ದು ಉಗ್ರರಿಗೆ ಮುಂದಿನ ತಂತ್ರ ರೂಪಿಸಲು ನೆರವಾಗಿತ್ತು. ಇಂತಹ ಅಪಾಯ ತಪ್ಪಿಸುವ ಸಲುವಾಗಿ ಪ್ರಸಾರಕ್ಕೆ ನಿಷೇಧ ಹೇರುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಜೇಟ್ಲಿ ಹೇಳಿದ್ದಾರೆ. ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಮಾಧ್ಯಮಗಳು ಸಂವೇದನೆ ಹಾಗೂ ಜವಾಬ್ದಾರಿಯುತವಾಗಿ ವರದಿ ಪ್ರಸಾರ ಮಾಡಬೇಕು ಎಂದರು.

SCROLL FOR NEXT