ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ 
ದೇಶ

ಬರಾಕ್ ಒಪ್ಪಿದ್ದು ಇದಕ್ಕೇ!

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಗಣ ರಾಜ್ಯೋತ್ಸವ ಅತಿಥಿಯಾಗಿ...

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಗಣ ರಾಜ್ಯೋತ್ಸವ ಅತಿಥಿಯಾಗಿ ಆಗಮಿಸುತ್ತಿರುವ ಉದ್ದೇಶ ಕೇವಲ ಎರಡು ದೇಶಗಳ ನಡುವಿನ ಬಾಂಧವ್ಯ ವೃದ್ಧಿಗಷ್ಟೆ ಸೀಮಿತವೇ? ಖಂಡಿತಾ ಇಲ್ಲ.

ಏಷ್ಯಾದಲ್ಲಿ ಬದಲಾದ ಪರಿಸ್ಥಿತಿ, ಭಾರತದಲ್ಲಿ ಬದಲಾದ ರಾಜನೀತಿಯನ್ನು ಮನಗಂಡೇ ಒಬಾಮ ನವದೆಹಲಿಗೆ ಭೇಟಿಕೊಡಲು ಮುಂದಾಗಿದ್ದಾರೆ.

2028ರಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವ, ವಿಶ್ವದ ಅತಿದೊಡ್ಡ ಸೇನಾ ಖರೀದಿದಾರ ಹಾಗೂ 3ನೇ ಅತಿದೊಡ್ಡ ಸೇನೆಯನ್ನು ಹೊಂದಿರುವ ಭಾರತ ಬಿಟ್ಟರೆ ಬೇರಿನ್ಯಾವ ದೇಶವೂ ಏಷ್ಯಾದಲ್ಲಿ ಚೀನಾಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಹೊಂದಿಲ್ಲ.

ಚೀನಾದ ಹೆಡೆಮುರಿ ಕಟ್ಟಬೇಕಾದರೆ ಭಾರತವೇ ಸರಿ. ಇದರ ಜತೆಗೆ, ಬೇಡಿಕೆ ಕಳೆದುಕೊಳ್ಳುತ್ತಿರುವ ಅಮೆರಿಕದ ಕೈಗಾರಿಕಾ ಕ್ಷೇತ್ರಕ್ಕೆ ಹೊಸ ಮಾರುಕಟ್ಟೆ ಆಗಬಲ್ಲ ಸಾಮರ್ಥ್ಯವೂ ಹೊಂದಿದೆ.

ಮೇಕ್ ಇನ್ ಇಂಡಿಯಾ ಭಾರತದ ಅರ್ಥ ವ್ಯವಸ್ಥೆಯನ್ನಷ್ಟೇ ಎತ್ತರಿಸುವುದಿಲ್ಲ. ರಫ್ತು ಆಧರಿತ ಚೀನಾದ ಮಾರುಕಟ್ಟೆಯನ್ನು ನಡುಗಿಸಲಿದೆ ಎನ್ನುವುದು ಅಮೆರಿಕಕ್ಕೂ ಅರಿವಿದೆ. ಇದನ್ನೆಲ್ಲ ಮನಗಂಡೇ ಒಬಾಮ ಜ.26ರಂದು ಭಾರತಕ್ಕೆ ಆಗಮಿಸುತ್ತಿರುವುದು. ಇದರ ಜತೆಗೆ, ಭಾರತದಲ್ಲಿ ತನ್ನ ಹಳೆಯ ವೈರಿ ರಷ್ಯಾದ ಪ್ರಾಬಲ್ಯ ಮುರಿಯುವ, ಈ ಮೂಲಕ ರಷ್ಯಾವನ್ನು ಮೂಲೆಗುಂಪು ಮಾಡುವ ದೂರಾಲೋಚನೆಯೂ ಅಮೆರಿಕಕ್ಕಿದೆ.

ಪ್ರತಿಯೊಂದಕ್ಕೂ ಚೀನಾ ಅಡ್ಡಗಾಲು
ಚೀನಾವು ಭಾರತದ ನೆರೆಯ ದೇಶ, ಹೂಡಿಕೆದಾರ, ಬಹುದೊಡ್ಡ ರಫ್ತುದಾರ ಎನ್ನುವುದೆಲ್ಲ ನಿಜ. ಆದರೆ, ಇದೆಲ್ಲಕ್ಕಿಂತ ಮಿಗಿಲಾಗಿ ಭಾರತದ ಅಭಿವೃದ್ದಿಗೆ ಒಳಗೊಳಗೆ ಕರುಬುತ್ತಿರುವ, ಭಾರತವನ್ನು ಹೇಗಾದರೂ ಮಾಡಿ ಹಣಿಯಬೇಕು ಎಂದು ತಂತ್ರ ರೂಪಿಸುತ್ತಿರುವ ಶತ್ರು. ಅರುಣಾಚಲ ವಿಚಾರದಲ್ಲಿ ಪದೇ ಪದೆ ತಕರಾರು ತೆಗೆಯುವ ಚೀನಾ, ಭಾರತದ ವಿರುದ್ಧ ಪಾಕ್ ಅನ್ನು ಎತ್ತಿಕಟ್ಟುತ್ತಿದೆ. ಭಾರತದ ವಿರೋಧದ ನಡುವೆಯೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಸ್ತೆ ನಿರ್ಮಾಣ ಕೈಗೆತ್ತಿಕೊಂಡಿದೆ. ಈ ಮೂಲಕ ಭಾರತದ ತಾಳ್ಮೆ ಪರೀಕ್ಷಿಸುತ್ತಿದೆ.

ಒಬಾಮ ಭೇಟಿಗೂ ಚೀನಾಗೂ ಏನು ಸಂಬಂಧ?

  • ಒಬಾಮ ಭೇಟಿಯ ಮುಖ್ಯ ಉದ್ದೇಶ ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟು ವೃದ್ಧಿ. ಆದರೆ, ಪರೋಕ್ಷವಾಗಿ ತನ್ನ ಶತ್ರುಗಳಾದ ಚೀನಾ, ರಷ್ಯಾವನ್ನು ಹಣಿಯುವ ಉದ್ದೇಶವೂ ಈ ಭೇಟಿ ಹಿಂದಿದೆ.
  • ಮೇಕ್ ಇನ್ ಇಂಡಿಯಾದ ಜಪ ಮಾಡುತ್ತಿರುವ ಭಾರತದ ಜತೆ ಸೇರಿ ಚೀನಾದ ಅರ್ಥವ್ಯವಸ್ಥೆಗೆ ಹೊಡೆತ ನೀಡುವುದೂ ಅಮೆರಿಕ ಗುರಿ.
  • ರಫ್ತು ಕ್ಷೇತ್ರದಲ್ಲಿ ಚೀನಾದ ಪ್ರಾಬಲ್ಯ ಮುರಿಯುವುದು
  • ಚೀನಾವು ಏಷ್ಯಾದ ಶಕ್ತಿ ಕೇಂದ್ರವಾಗಲು ವ್ಯೂಹ ತಂತ್ರ ರೂಪಿಸುತ್ತಿರುವುದು ಹೊಸ ವಿಚಾರವಲ್ಲ. ಇದರ ಜತೆಗೆ, ಏಷ್ಯಾದಿಂದ ಅಮೆರಿಕವನ್ನು ಹೊರಗಿಡುವ, ಭಾರತವನ್ನು ಮೂಲೆಗೆ ತಳ್ಳುವ ಮಹತ್ವಾಕಾಂಕ್ಷೆಯನ್ನೂ ಇಟ್ಟುಕೊಂಡಿದೆ. ಅಮೆರಿಕ-ಭಾರತ ನಡುವೆ ಹೆಚ್ಚುತ್ತಿರುವ ಬಾಂಧವ್ಯ ಚೀನಾ ಪಾಲಿಗೆ ದೊಡ್ಡ ಹಿನ್ನಡೆ.
  • ಏಷ್ಯಾದ ಶಕ್ತಿ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಭಾರತದ ಜತೆಗೆ ಉತ್ತಮ ಬಾಂಧ್ಯವ್ಯ ಕಾಯ್ದುಕೊಳ್ಳುವ ಮೂಲಕ ಚೀನಾಗೆ ಪರೋಕ್ಷ ಸೆಡ್ಡು ಹೊಡೆಯುವುದು
ತೈಲ ದರ ಕುಸಿತ ಅಮೆರಿಕದ ಸಂಚೇ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT