ನವದೆಹಲಿ: ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳೂ ಅಲ್ಪಕಾಲದಲ್ಲಿಯೇ ಇಂಥದ್ದೊಂದು ದಾಖಲೆ ಮಾಡಿರಲಿಕ್ಕಿಲ್ಲ. ಅದೂ ಗಿನ್ನಿಸ್ ದಾಖಲೆಗೆ ಸೇರಿದ್ದಂತೂ
ಇಲ್ಲವೇ ಇಲ್ಲ. ಅಂಥ ಒಂದು ಪ್ರಶಂಸಾರ್ಹ ಸಾಧನೆ ಪ್ರಧಾನಮಂತ್ರಿ ಜನಧನ ಯೋಜನೆಯದ್ದು. ಕಳೆದ ವರ್ಷದಆ.15ರಂದು ಘೋಷಣೆ ಮಾಡಿದ್ದ ಯೋಜನೆಯನ್ನು 28ಕ್ಕೆ ದೇಶಾದ್ಯಂತ ಏಕಕಾಲಕ್ಕೆ ಆರಂಭಿಸಲಾಗಿತ್ತು. ಆ ದಿನದ ಮೊದಲ್ಗೊಂಡು ಇದುವರೆಗೆ ಎಲ್ಲ ಬ್ಯಾಂಕ್ ಗಳಲ್ಲಿ 11.5 ಕೋಟಿ ಖಾತೆಗಳನ್ನುತೆರೆಯಲಾಗಿದೆ. ಜತೆಗೆ ರು. 9 ಸಾವಿರ ಕೋಟಿ ಠೇವಣಿ ಸಂಗ್ರಹಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಶೇ.60 ಮತ್ತು ನಗರ ಪ್ರದೇಶಗಳಲ್ಲಿ ಶೇ.40ರಷ್ಟು ಖಾತೆಗಳನ್ನು ತೆರೆಯಲಾಗಿದೆ. ಈಗಾಗಲೇ ತೆರೆಯಲಾಗಿರುವ ಖಾತೆಗಳ ಪೈಕಿ ಶೇ.28ರಷ್ಟು ಮಾತ್ರ ಚಾಲನೆಯಲ್ಲಿವೆ. ಅಷ್ಟೂ ಖಾತೆಗಳನ್ನು ಸದುಪಯೋಗ ಆಗುವಂತೆ ಮಾಡಬೇಕಾಗಿರು
ವುದು ಸರ್ಕಾರದ ಮುಂದಿರುವ ಸವಾಲಾಗಿದೆ ಎಂದಿದ್ದಾರೆ ಜೇಟ್ಲಿ.
ಪ್ರಧಾನಿ ಹರ್ಷ: ನಿಗದಿತ ದಿನಕ್ಕಿಂತ ಮೊದಲೇ (ಜ.26) ಯೋಜನೆ ಜನೆ ಗುರಿ ತಲುಪಿದ್ದಕ್ಕೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು,ಬಡವರ್ಗದವರನ್ನು ಹಣಕಾಸು ವ್ಯವಸ್ಥೆಗೆ ಸೇರ್ಪಡೆ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ ಎಂದು ಬರೆದುಕೊಂಡಿದ್ದಾರೆ.