ಬಂಧಿತ ಆರೋಪಿಗಳು 
ದೇಶ

ಕ್ರಿಕೆಟ್ ಕೊಲೆ: ಆರೋಪಿಗಳ ಬಂಧನ

ಬನ್ನೇರುಘಟ್ಟ ರಸ್ತೆ ಬಸವನಪುರ ವೀವರ್ಸ್ ಕಾಲೋನಿಯಲ್ಲಿ ಕಳೆದ ಭಾನುವಾರ ಕ್ರಿಕೆಟ್ ಆಡುವ ವೇಳೆ...

ಬೆಂಗಳೂರು: ಬನ್ನೇರುಘಟ್ಟ ರಸ್ತೆ ಬಸವನಪುರ ವೀವರ್ಸ್ ಕಾಲೋನಿಯಲ್ಲಿ ಕಳೆದ ಭಾನುವಾರ ಕ್ರಿಕೆಟ್ ಆಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಕೊಲೆ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆಯ

ಜೆ.ಪಿ.ನಗರ 8ನೇ ಹಂತ ನಿವಾಸಿಗಳಾದ ವೇಲು (20), ವೈ.ಆರ್.ಎಸ್.ಕಣ್ಣನ್ (20), ಸಂತೋಷ್ (19), ಬನ್ನೇರುಘಟ್ಟ ಸಮೀಪದ ಬಿಲ್ಲವರದಹಳ್ಳಿ ನಿವಾಸಿಗಳಾದ ವಿನೋದ್(19), ಹಾಗೂ ಮಂಜುನಾಥ(22) ಬಂಧಿತರು. ಕಳೆದ ಭಾನುವಾರ (ಜ.18) ವೀವರ್ಸ್ ಕಾಲೋನಿ ಆಟದ ಮೈದಾನದಲ್ಲಿ ಕಲ್ಕೆರೆ ನಿವಾಸಿ ರಾಜೇಶ್ ಅಲಿಯಾಸ್ ಗುಂಡ(24) ಎಂಬಾತನ ಕೊಲೆಯಾಗಿತ್ತು. ಘಟನೆಯಲ್ಲಿ ಶಿವು ಹಾಗೂ ಬಾಲಾಜಿ ಎಂಬುವರಿಗೆ ಇರಿತದ ಗಾಯಗಳಾಗಿದ್ದವು. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೋ ಬಾಲ್‌ನಿಂದ ಕೊಲೆ

ನಗರದ ಹಲವೆಡೆ ಕೆಲಸ ಮಾಡುವ ಬಿಲ್ಲವರದಹಳ್ಳಿ ಹಾಗೂ ಕಲ್ಕೆರೆ ಗ್ರಾಮದ ಯುವಕರು ಭಾನುವಾರ ಮಧ್ಯಾಹ್ನ ಕ್ರಿಕೆಟ್ ಆಡಲು ಬಂದಿದ್ದರು. ಎರಡು ಗ್ರಾಮಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಬಿಲ್ಲವರದಹಳ್ಳಿ ಗ್ರಾಮದ ವಿನೋದ್ ಬೌಲಿಂಗ್ ಮಾಡುತ್ತಿದ್ದ. ಈ ವೇಳೆ ಕಲ್ಕೆರೆ ಗ್ರಾಮದ ಯುವಕರು ಬ್ಯಾಟಿಂಗ್ ಮಾಡುತ್ತಿದ್ದದರು. ಅದೇ ಗ್ರಾಮದ ಯುವಕನೇ ಅಂಪೈರಿಂಗ್ ಮಾಡುತ್ತಿದ್ದ.

ವಿನೋದ್ ನೋಬಾಲ್ ಎಸೆದಿದ್ದರಿಂದ, ಅಂಪೈರ್ ನೋ ಬಾಲ್ ಎಂದು ಹೇಳಿದ್ದ. ಆದರೆ, ಅದಕ್ಕೋಪ್ಪದ ವಿನೋದ್ ಹಾಗೂ ಆತನ ತಂಡ ಬಾಲ್ ಸರಿಯಾಗಿದೆ ಎಂದು ವಾದ ಮಾಡಿದ್ದರು. ಇದರೊಂದಿಗೆ ಎರಡು ತಂಡಗಳ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ವಿನೋದ್ ಹಾಗೂ ತಂಡ, ಕಲ್ಲೆಕೆರೆಯ ರಾಜೇಶನಿಗೆ ಚಾಕುವಿನಿಂದ ಇರಿದಿದ್ದರು. ಬಿಡಿಸಲು ಬಂದ ಶಿವು ಹಾಗೂ ಬಾಲಾಜಿಗೂ ಇರಿದು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT