ನವದೆಹಲಿ: ಸುನಂದಾ ಪುಷ್ಕರ್ ಅವರು ಸಾವಿಗೀಡಾಗುವ ಮುನ್ನಾ ದಿನ ತನ್ನ ಗೆಳತಿ, ಪತ್ರಕರ್ತೆ ನಳಿನಿ ಸಿಂಗ್ ಜತೆ ಐಪಿಎಲ್ ಕೊಚ್ಚಿ ವಿವಾದದ ಬಗ್ಗೆ ಮಾತನಾಡಿದ್ದರು.
ಶುಕ್ರವಾರ ನಳಿನಿ ಸಿಂಗ್ ಅವರು ದೆಹಲಿ ಪೊಲೀಸರ ವಿಶೇಷ ತನಿಖಾ ತಂಡಕ್ಕೆ ಈ ವಿಚಾರವನ್ನು ತಿಳಿಸಿದ್ದಾರೆ. ಸುನಂದಾ ನಿಗೂಢವಾಗಿ ಸಾವಿಗೀಡಾಗುವ ಮುನ್ನಾ ದಿನ ತನ್ನೊಂದಿಗೆ ಮಾತನಾಡಿದ್ದು, ಐಪಿಎಲ್ ಹಗರಣದ ಬಗ್ಗೆ ಪ್ರಸ್ತಾಪಿಸಿದ್ದರು. ಐಪಿಎಲ್ ಕೊಚ್ಚಿ ತಂಡಕ್ಕೆ ಸಂಬಂಧಿಸಿದ ವಿವಾದವನ್ನು ತರೂರ್‍ಗಾಗಿ ನಾನೇ ಮೈಮೇಲೆ ಎಳೆದುಕೊಂಡೆ ಎಂದು ಸುನಂದಾ ಹೇಳಿದ್ದರು ಎಂದಿದ್ದಾರೆ ನಳಿನಿ. ಗುರುವಾರ ರಾಹುಲ್ ಕನ್ವಾಲ್ ಎಂಬ ಮತ್ತೊಬ್ಬ ಪತ್ರಕರ್ತರನ್ನು ಕೂಡ ತನಿಖಾ ತಂಡ ವಿಚಾರಣೆಗೊಳಪಡಿಸಿತ್ತು.
ಸಂದರ್ಶನಕ್ಕೆಂದು ನಾನು ಸುನಂದಾರಿಗೆ ಕರೆ ಮಾಡಿದ್ದೆ. ಆಗ ಅವರು, ನಾನು ಕ್ಷಯರೋಗದಿಂದ ಬಳಲುತ್ತಿದ್ದು, ಆದಷ್ಟು ಬೇಗ ಸಾಯುವವಳಿದ್ದೇನೆ. ಆದರೆ ಅದಕ್ಕೂ ಮೊದಲು ನಾನು ಶಶಿ ತರೂರ್ ವಿಚಾರವನ್ನು ಬಹಿರಂಗಪ ಡಿಸಬೇಕಿದೆ. ಅವರ ತಲೆತಗ್ಗಿಸುವಂತೆ ಮಾಡಬೇಕಿದೆ' ಎಂದಿದ್ದರು ಎಂದು ಕನ್ವಾಲ್ ತಿಳಿಸಿದ್ದಾರೆ.