ಹೈದ್ರಾಬಾದ್: ಬಾಲಕಾರ್ಮಿಕರಾಗಿ ದುಡಿಸಲು ಬಿಹಾರ, ಉತ್ತರಪ್ರದೇಶದಿಂದ ಕರೆತಂದಿದ್ದ 200 ಮಕ್ಕಳನ್ನು ಹೈದ್ರಾಬಾದ್ ಪೊಲೀಸರು ಶನಿವಾರ ರಕ್ಷಿಸಿದ್ದಾರೆ.
ಈ ಸಂಬಂಧ ಮಕ್ಕಳನ್ನು ಕರೆತಂದಿದ್ದ ಆರೋಪಿ ಯಾಸಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಕ್ಕಳನ್ನು ಹೈದ್ರಾಬಾದ್ನ ಬಳೆ ಮತ್ತು ಚಪ್ಪಲಿ ಉದ್ಯಮದಲ್ಲಿ ಬಾಲಕಾರ್ಮಿಕರಾಗಿ ದುಡಿಸಿಕೊಳ್ಳಲು ಕರೆತರಲಾಗಿತ್ತು.
ಹೈದ್ರಾಬಾದ್ ಪೊಲೀಸರು ಆಪರೇಷನ್ ಸ್ಮೈಲ್ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಂತೆ ಮನೆಯಿಂದ ಓಡಿಕೊಂಡು ಬಂದಿರುವ ಹಾಗೂ ಅಪಹರಣಗೊಂಡ ಮಕ್ಕಳನ್ನು ಮತ್ತೆ ಅಳರ ಪಾಲಕರ ತೆಕ್ಕೆಗೆ ಸೇರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ.