ನ್ಯೂಯಾರ್ಕ್: ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ಆಗಮನ ಕುರಿತಂತೆ ಭಾನುವಾರ ಟ್ವೀಟ್ ಮಾಡಿರುವ ವೈಟ್ ಹೌಸ್ ಭಾರತ-ಅಮೆರಿಕದ ಬಾಂಧವ್ಯದ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಜೈಹಿಂದ್ ಎಂದು ಹೇಳಿದೆ.
ಅಮೇರಿಕದ ಅದ್ಯಕ್ಷರು ಭಾರತದ ಗಣರಾಜ್ಯೋತ್ಸವ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿ. ಇದು ಎರಡು ರಾಷ್ಟ್ರಗಳ ನಡುವಿನ ಉತ್ತಮ ಬಾಂಧವ್ಯ ರೂಪಿಸುವ ಹೊಸ ಅಧ್ಯಯವೊಂದನ್ನು ಪ್ರಾರಂಭಿಸುತ್ತದೆ. ಜೈ ಹಿಂದ್ ಎಂದು ಟ್ವೀಟ್‌ನಲ್ಲಿ ಹೇಳಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅಮೇರಿಕಾ ವಿದೇಶಾಂಗ ಸಚಿವೆ ಸುಸನ್ ರೈಸ್, ಒಬಾಮ ಅವರೊಂದಿಗೆ ಗಣರಾಜ್ಯೋತ್ಸವ ವೇದಿಕೆಯಲ್ಲಿ ಭಾಗಿಯಾಗಲು ಬಹಳ ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ.
ಒಬಾಮ ಭಾರತ ಭೇಟಿ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿದ್ದು ಪ್ರಮುಖವಾಗಿ ಪರಮಾಣು ಒಪ್ಪಂದ ಮೋದಿ ಒಬಾಮ ಭೇಟಿ ವೇಳೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.