ನವದೆಹಲಿ: ಗಣರಾಜ್ಯೋತ್ಸವದ ಅತಿಥಿಯಾಗಿ ಆಗಮಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತದ ಅತಿಥಿ ಸತ್ಕಾರಕ್ಕೆ ಮನಸೋತಿರುವುದಾಗಿ ಹೇಳಿದ್ದಾರೆ.
ಹೈದ್ರಾಬಾದ್ ಹೌಸ್‘ನಲ್ಲಿ ಮೋದಿ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಬಾಮ, ನಮಸ್ತೆ ಎಂದು ಮಾತು ಆರಂಭಿಸಿದರು. ‘ಮೇರಾ ಪ್ಯಾರ್ ಭರಾ ನಮಸ್ಕಾರ್’ ಎನ್ನುತ್ತಾ ಗಣರಾಜ್ಯೋತ್ಸವದ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ, ಭಾರತ ಅಮೆರಿಕ ಬಾಂಧವ್ಯ ವೃದ್ಧಿಗೊಳಿಸಲು ಬದ್ಧವಾಗಿರುವುದಾಗಿ ಹೇಳಿದ ಒಬಾಮಾ, ಚಾಯ್ ಪೇ ಚರ್ಚೆ ಇನ್ನಷ್ಟು ಆಗಬೇಕು. ಚಾಯ್ ಪೇ ಚರ್ಚಾವನ್ನು ಬಣ್ಣಿಸಿದರು. ಉಭಯ ರಾಷ್ಟ್ರಗಳ ನಡುವೆ ವ್ಯವಹಾರ ವೃದ್ದಿಯಾಗುತ್ತಿದೆ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಬೆಂಬಲ ನೀಡುವುದಾಗಿ ಹೇಳಿದ ಒಬಾಮಾ, ಚಲಿಯೇ ಸಾಥ್ ಸಾಥ್ ಎಂದು ಹಿಂದಿಯಲ್ಲಿ ಹೇಳಿದರು.
ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಖಾಯಂ ಸ್ಥಾನ ಭಾರತದ ಬೇಡಿಕೆಗೆ ಬೆಂಬಲಿಸುವುದಾಗಿ ಒಬಾಮಾ ಹೇಳಿದ್ದಾರೆ.