ಅಸ್ಸಾಂನಲ್ಲಿ ಬಾಂಬ್ ಸ್ಫೋಟ
ಅಸ್ಸಾಂನಲ್ಲಿ ಉಗ್ರರು ಅಟ್ಟಹಾಸ ಮುಂದುವರಿಸಿದ್ದು, ಗಣರಾಜ್ಯೋತ್ಸವವಾದ ಇಂದು ಸಹ ತಿನ್ಸುಕಿಯಾ...
ಗುವಾಹಟಿ: ಅಸ್ಸಾಂನಲ್ಲಿ ಉಗ್ರರು ಅಟ್ಟಹಾಸ ಮುಂದುವರಿಸಿದ್ದು, ಗಣರಾಜ್ಯೋತ್ಸವವಾದ ಇಂದು ಸಹ ತಿನ್ಸುಕಿಯಾ ಜಿಲ್ಲೆಯ ದಿಗ್ಬಾಯ್ ಪಟ್ಟಣದ ಬಳಿ ಬಾಂಬ್ ಇಟ್ಟು ಸ್ಪೋಟಿಸಿದ್ದಾರೆ.
ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸಿ ಸಿದ್ಧಪಡಿಸಲಾದ ಅಲ್ಪ ಪ್ರಮಾಣದ ಸ್ಫೋಟ ಸಾಮರ್ಥ್ಯ ಹೊಂದಿದ ಬಾಂಬ್ ಅನ್ನು ಸ್ಪೋಟಿಸಿದ್ದು, ಘಟನೆ ವೇಳೆ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲದಿರುವುದಾಗಿ ವರದಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದು, ಅಸ್ಸಾಂನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.