ಯೋಗ ಗುರು ಬಾಬಾ ರಾಮ್ ದೇವ್ 
ದೇಶ

ಗಂಡು ಮಗುವಿನ ಫಾರ್ಮುಲ

ಗಂಡು ಮಗು ಬೇಕೆಂದರೆ ದಿವ್ಯ ಪುತ್ರ ಜೀವಕ್ ಸೀಡ್' ಅನ್ನು ಕೊಂಡು ಕೊಳ್ಳಿ! ಎಂದು ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ...

ನವದೆಹಲಿ : ಗಂಡು ಮಗು ಬೇಕೆಂದರೆ  'ದಿವ್ಯ ಪುತ್ರ ಜೀವಕ್  ಸೀಡ್' ಅನ್ನು ಕೊಂಡು ಕೊಳ್ಳಿ! ಎಂದು ಯೋಗ ಗುರು ಬಾಬಾ ರಾಮ್  ದೇವ್  ಅವರ ಪತಂಜಲಿ ಫಾರ್ಮಸಿಯಲ್ಲಿ ಇಂತಹುದೊಂದು ಔಷಧ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇದು ಬಂಜೆತನ ನಿವಾರಿಸುವ ನೈಸರ್ಗಿಕ  ಔಷಧ ಎಂದು ಕೆಟಲಾಗ್ ನಲ್ಲಿ ಬರೆಯಲಾಗಿದ್ದರೂ ಕೆಲವೊಂದು ಪತಂಜಲಿ ಫಾರ್ಮಸಿಗಳು, ಈ ಔಷಧ ಸೇವಿಸಿದರೆ ಗಂಡು ಮಗುವಾಗುತ್ತದೆ ಎಂದು ಗ್ರಾಹಕರಲ್ಲಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಈ ಔಷಧದ ಒಂದು ಪ್ಯಾಕೆಟ್ಗೆ ರು. 35 ದರವಿದ್ದು, ಪ್ಯಾಕೆಟ್ ನಲ್ಲಿ ಗಂಡು ಮಗುವಿನ ಬಗ್ಗೆ ಪ್ರಸ್ತಾಪವಿಲ್ಲ. ಆದರೆ ಎಷ್ಟೋ ಮಂದಿ ಗ್ರಾಹಕರು ಬಂದು ಗಂಡು ಮಗು ಆಗುವ ಔಷಧವನ್ನು ಕೊಡಿ ಎಂದೇ ಇದನ್ನು ಖರೀದಿಸುತ್ತಾರೆ ಎನ್ನುತ್ತಾರೆ ರಾಮ್ದೇವ್ನ ಔಷಧ ಮಳಿಗೆಯಲ್ಲಿ ಕೆಲಸ ಮಾಡುವ ಡಾ. ಶ್ಯಾಮ್ಸುಂದರ್, ನಿಮಗೆ ಗಂಡು ಮಕ್ಕಳಿಲ್ಲದಿದ್ದರೆ, ಪುತ್ರ ಜೀವಕ್ ಔಷಧವನ್ನು ಕೊಂಡುಕೊಳ್ಳಿ . ಇದು ನಿಮಗೆ ಸಹಾಯ ಮಾಡಬಲ್ಲದು  ಎಂದು ಸ್ವಾಮೀಜಿ (ರಾಮ್ದೇವ್)ಯೇ ಹೇಳಿದ್ದಾರೆ ಎನ್ನುತ್ತಾರೆ ಶ್ಯಾಮ್ ಸುಂದರ್.ಇದೇ ವೇಳೆ, ಇದೇ ವೇಳೆ ಈ ಔಷಧವನ್ನು ಹೆಚ್ಚಾಗಿ ಹರ್ಯಾಣದ ದಂಪತಿಗಳು ಖರೀದಿಸುತ್ತಿರುವ  ವಿಚಾರವೂ ಬೆಳಕಿಗೆ ಬಂದಿದೆ. ದೇಶದಲ್ಲೇ ಗಂಡು ಹೆಣ್ಣಿನ ಅನುಪಾತದಲ್ಲಿ ಅತ್ಯಂತ ಹೆಚ್ಚು ಅಂತರವಿರುವುದು  ಹರ್ಯಾಣದಲ್ಲಿ. ಹೀಗಾಗಿಯೇ ಪ್ರಧಾನಿ ಮೋದಿ ಅವರು ಕಳೆದ ವಾರವಷ್ಟೇ ಹೆಣ್ಣು ಮಕ್ಕಳನ್ನು ಉಳಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!