ನವದೆಹಲಿ: ಇರಾಕ್, ಸಿರಿಯಾದಲ್ಲಿ ತಮ್ಮ ಕಬಂಧ ಬಾಹುಗಳನ್ನು ಚಾಚಿರುವ ಇಸಿಸ್ ಉಗ್ರ ಸಂಘಟನೆ ಭಾರತಕ್ಕೆ ಕಾಲಿಡುವ ಸಮಯ ದೂರವಿಲ್ಲ. ಅಫಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದ ಕೆಲ ಪ್ರದೇಶಗಳಲ್ಲಿ ತನ್ನ ಸಂಘಟನೆಯನ್ನು ವಿಸ್ತರಿಸಲು ಇಸಿಸ್ ಎಲ್ಲ ಸಿದ್ಧ ತೆ ನಡೆಸಿದ್ದು, ಈ ಪ್ರದೇಶಗಳ ಕಾರ್ಯಾಚರಣೆಗೆ `ಖುರಸನ್' ಎಂಬ ಹೆಸರನ್ನೂ ಇಟ್ಟಿದೆ. ಅಷ್ಟೇ ಅಲ್ಲ, ಪಾಕಿಸ್ತಾನಿ ತಾಲಿಬಾನ್ ಕಮಾಂಡರ್ ಆಗಿದ್ದ ಉಗ್ರ ಹಫೀಜ್ ಸಯೀದ್ ಖಾನ್(42)ನನ್ನು ಖುರಸನ್‍ನ ಮುಖ್ಯಸ್ಥ(ವಲಿ) ಎಂದು ಘೋಷಿಸಿದೆ. ಭಾರತದಲ್ಲಿ ತನ್ನ ಘಟಕ ಸ್ಥಾಪಿಸಿರುವುದಾಗಿ ಅಲ್‍ಖೈದಾ ಉಗ್ರ ಸಂಘಟನೆಯು ಘೋಷಿಸಿದ 4 ತಿಂಗಳಲ್ಲೇ ಈ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಈಗ ಅಲ್‍ಖೈದಾ ಹಾಗೂ ಇಸಿಸ್ ಕೈಜೋಡಿ ಸಿದ್ದು, ಜಂಟಿಯಾಗಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿರುವುದು ವಿಶ್ವಾದ್ಯಂತ ಭಯದ ವಾತಾವರಣ ಸೃಷ್ಟಿಸಿದೆ. ಇದೇ ವೇಳೆ, ಮಹಾರಾಷ್ಟ್ರದ ಕಲ್ಯಾಣ್‍ನ 4 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ಹಲವು ಯುವಕರನ್ನು ಇಂಟರ್ನೆಟ್ ಮೂಲಕ ಇಸಿಸ್ ನೇಮಕ ಮÁಡಿರುವ ಹಿನ್ನೆಲೆಯಲ್ಲಿ ಹೊಸ ಬೆಳವಣಿಗೆಗಳ ಮೇಲೆ ಹದ್ದಿನ ಕಣ್ಣಿಡುವಂತೆ ಭಾರತೀಯ ಅಧಿಕಾರಿಗಳಿಗೆ ಭದ್ರತಾ ವಿಶ್ಲೇಷಕರು ಸಲಹೆ ನೀಡಿದ್ದಾರೆ.
ಅದ್ನಾನಿಯ ಸಂದೇಶವೇನು?: ಖುರಸನ್‍ನ ನಾಯಕನಾಗಿ ನೇಮಕಗೊಂಡಿರುವ ಉಗ್ರ ಅದ್ನಾನಿಯು ಇಸಿಸ್ ವಿಸ್ತರಣೆ ಬಗೆಗಿನ ವಿಡಿಯೂ ಸಂದೇಶವನ್ನು
ಕಳುಹಿಸಿದ್ದಾನೆ. `ಮುಜಾಹಿದೀನ್‍ಗಳಿಗೆ ನಾವು ಸಿಹಿ ಸುದ್ದಿಯನ್ನು ತಂದಿದ್ದೇವೆ. ಖುರಸನ್(ಆಫ್ಘಾನ್, ಪಾಕಿಸ್ತಾನ ಮತ್ತು ಭಾರತದ ಭಾಗಗಳಲ್ಲಿ) ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ವಿಸ್ತರಣೆಯಾಗುತ್ತಿದೆ. ಎಲ್ಲ ಮುಜಾಹಿದೀನ್‍ಗಳೂ `ಖಲೀಫಾ' ತಂಡಕ್ಕೆ ಸೇರ್ಪಡೆಗೊಳ್ಳಿ. ನಿಮ್ಮೊಳಗಿನ ವಿಭಜನೆ ಬಿಟ್ಟು ಒಗ್ಗಟ್ಟು ತೋರಿಸಿ. ಬಹುದೇವೋಪಾಸನೆಯನ್ನು ನಿರ್ಮೂಲನೆ ಮಾಡಿ ಏಕದೇವೋಪಾಸನೆಯನ್ನು ಜಾರಿಗೆ ತನ್ನಿ' ಎಂದು ಸಂದೇಶದಲ್ಲಿ ಹೇಳಲಾಗಿದೆ. ತಾಲಿಬಾನ್ `ಉಗ್ರ'ವಲ್ಲ!: ಆಫ್ಘಾ ನ್ ತಾಲಿಬಾನ್ ಉಗ್ರ ಸಂಘಟನೆಯಲ್ಲ, ಅದು `ಸಶಸ್ತ್ರ ದಂಗೆ'ಯಷ್ಟೆ. ಆದರೆ, ಇಸಿಸ್ ಮಾತ್ರ `ಉಗ್ರ ಸಂಘಟನೆ'. ಎರಡು ಪ್ರಮುಖ ಭಯೋತ್ಪಾದನಾ ಸಂಘಟನೆಗಳಿಗೆ ಇಂತಹುದೊಂದು
ವ್ಯಾಖ್ಯಾನ ನೀಡಿದ್ದು ಬೇರ್ಯಾರೂ ಅಲ್ಲ. ಅಮೆರಿಕ. ಈ ಮೂಲಕ ವಿಶ್ವದ ಸಿರಿವಂತ ರಾಷ್ಟ್ರವು ಹೊಸ ವಿವಾದ ಸೃಷ್ಟಿಸಿದೆ. ತಾಲಿಬಾನ್ ಉಗ್ರ ಸಂಘಟನೆ ಅಲ್ಲ. ಅದು ಸಶಸ್ತ್ರ ದಂಗೆ. ಇಸಿಸ್ ಮಾತ್ರ ಭಯೋತ್ಪಾದನಾ ಸಂಘಟನೆ. ಹಾಗಾಗಿ ನಾವು ಉಗ್ರರಿಗೆ ವಿನಾಯ್ತಿ ನೀಡಲು ಸಾಧ್ಯವಿಲ್ಲ ಎಂದು ಶ್ವೇತಭವನದ ವಕ್ತಾರ ಎರಿಕ್ ಶುಲ್ಝ್ ಹೇಳಿದ್ದಾರೆ.