ದೇಶ

ದೇಶದ ತಲಾದಾಯ ರು.7 ಸಾವಿರ

`ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಳ್ಳೆಯ ದಿನಗಳು ಬರುತ್ತವೆ.' ಚುನಾವಣಾ ಪ್ರಚಾರದ ವೇಳೆ...

ನವದೆಹಲಿ: `ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಳ್ಳೆಯ ದಿನಗಳು ಬರುತ್ತವೆ.' ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಹೇಳಿದ್ದು ಮತ್ತೊಮ್ಮೆ ನಿಜವಾಗಿದೆ.

ದೇಶದ ವ್ಯಕ್ತಿಯೊಬ್ಬನ ತಲಾ ಆದಾಯವನ್ನು ಪ್ರತಿ ತಿಂಗಳಿಗೆ ರು 6,699ಕ್ಕೆ ಏರಿಸಿ ನಿಗದಿಪಡಿಸಲಾಗಿದೆ. ಈ ಹಿಂದೆ ಅದರ ಪ್ರಮಾಣ ರು 6,198.33 ಆಗಿತ್ತು. ರಾಷ್ಟ್ರೀಯ ಲೆಕ್ಕಪತ್ರ ತಪಸಣಾ ವಿಧಾನ (ನ್ಯಾಷನಲ್ ಅಕೌಂಟ್ಸ್ ಕ್ಯಾಲ್ಕ್ಯುಲೇಷನ್ ಮೆಥಡಾಲಜಿ)ದಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದರಿಂದ ಈ ಬೆಳವಣಿಗೆ ಉಂಟಾಗಿದೆ.

ಪ್ರತಿ ಐದು ವರ್ಷಗಳಿಗೆ ಒಮ್ಮೆ ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. 2010ರಲ್ಲಿ ಈ ವ್ಯವಸ್ಥೆಯಲ್ಲಿ ಬದಲು ಮಾಡಲಾಗಿತ್ತು. ಪರಿಷ್ಕೃತ ವಿಧಾನಕ್ಕೆ 2011-12ನೇ ವಿತ್ತೀಯ ವರ್ಷವನ್ನು ಆಧಾರವನ್ನಾಗಿಸಿಕೊಳ್ಳಲಾಗಿದೆ. 2012-12ನಲ್ಲಿ ವ್ಯಕ್ತಿಯ ತಲಾ ಆದಾಯ ರು 5,966.08 ಮತ್ತು ರು 5,359.67 ಎಂದು ನಿರ್ಧರಿಸಲಾಗಿತ್ತು.  ಇದೇ ವೇಳೆ 2013-14ನೇ ವಿತ್ತೀಯ ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆ ಶೇ.50ರಷ್ಟು ಬೆಳವಣಿಗೆ ಸಾಧಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.

ನರೇಂದ್ರ ಮೋದಿ ಅ„ಕಾರಕ್ಕೇರಿದ ಸಂದರ್ಭದಲ್ಲಿ ಅರ್ಥವ್ಯವಸ್ಥೆ ಶೇ.6.7ರ ದರದಲ್ಲಿ ಬೆಳವಣಿಗೆ ಸಾಧಿಸಿತ್ತು. ಈ ಹಿಂದೆ ವರದಿಯಾಗಿದ್ದಂತೆ ಅದು ಶೇ.4.7 ಅಲ್ಲ ಎಂದು ಕೇಂದ್ರ ಅಂಕಿ ಅಂಶ ಇಲಾಖೆಯ ಮುಖ್ಯ ಸಾಂಖ್ಯಿಕ ಅಧಿಕಾರಿ ಟಿ.ಸಿ.ಎ.ಅನಂತ್ ತಿಳಿಸಿದ್ದಾರೆ. ಸ್ಮಾರ್ಟ್ ಫೋನ್ ಮತ್ತು ಎಲ್‍ಇಡಿ ಉತ್ಪಾದನಾ ಕ್ಷೇತ್ರಗಳಲ್ಲಿಯೂ ಗಣನೀಯ ಪ್ರಗತಿ ಸಾಧಿಸಿರುವುದು ಕೂಡ ಈ ಬೆಳವಣಿಗೆ ದಾಖಲಿಸಲು ನೆರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT