ದೇಶ

ಸೌದಿಯತ್ತ ಇಸಿಸ್ ಕಣ್ಣು: ಹೊಸ ದೊರೆಯೇ ಉಗ್ರರಿಗೆ ಅಡ್ಡಿ

Rashmi Kasaragodu

ವಾಷಿಂಗ್ಟನ್: ಸೌದಿ ಅರೇಬಿಯಾದ ಆಡಳಿತವು ಬದಲಾಗುತ್ತಿರುವುದು ಇಸಿಸ್ ಸೇರಿದಂತೆ ಉಗ್ರ ಸಂಘಟನೆಗಳಿಗೆ ನಡುಕ ಹುಟ್ಟಿಸಿದೆ. ದೊರೆ ಅಬ್ದುಲ್ಲಾ ನಿಧನರಾದ ಹಿನ್ನೆಲೆಯಲ್ಲಿ
ಈಗ ಸಲ್ಮಾನ್ ಅವರು ಸೌದಿಯ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಆದರೆ ಉಗ್ರ ವಿರೋಧಿ  ನಿಲುವು ಹೊಂದಿರುವ ಸಲ್ಮಾನ್ ಅವರು ಅಧಿ ಕಾರಕ್ಕೇರಿರುವುದು ಇಸಿಸ್, ಅಲ್‍ಖೈದಾದ ಭೀತಿಗೆ ಕಾರಣವಾಗಿದೆ.
ಇರಾಕ್, ಸಿರಿಯಾದಲ್ಲಿ ಪ್ರಾಬಲ್ಯ ಸಾಧಿಸಿರುವ ಇಸಿಸ್‍ಗೆ ಶ್ರೀಮಂತ ಮಧ್ಯ ಪ್ರಾಚ್ಯ ರಾಷ್ಟ್ರವಾದ ಸೌದಿ ಅರೇಬಿಯಾವನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂಬ ಮಹದಾಸೆ ಇದೆ. ಆದರೆ ಸಲ್ಮಾನ್ ಅವರ ಚಿಂತನೆಗಳು ಇಸಿಸ್ ನಿಲುವಿಗೆ ಪೂರಕವಾಗಿಲ್ಲ. ಏಕೆಂದರೆ, ಸೌದಿ ಅರೇಬಿಯಾವು ಅಮೆರಿಕದ ಪ್ರಮುಖ ಮಿತ್ರರಾಷ್ಟ್ರವೆಂದೇ ಪರಿಗಣಿಸಲ್ಪಟ್ಟಿದೆ. ಜತೆಗೆ, ಇಸಿಸ್ ವಿರುದ್ಧದ ಹೋರಾಟಕ್ಕೆ ಸೌದಿಯೂ ಸಾಥ್ ನೀಡಿದ್ದು, ಕಳೆದ ವರ್ಷ ಸಿರಿಯಾದಲ್ಲಿ ಇಸಿಸ್ ನೆಲೆ ಮೇಲೆ ನಡೆದ ವೈಮಾನಿಕ ದಾಳಿ ವೇಳೆ  ಸೌದಿ ಯುವ ರಾಜ ಖಾಲಿದ್ ಕೂಡ ಸಮರ ವಿಮಾನದ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲ, ಸೌದಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ, ಶಿಯಾ  ಅಲ್ಪಸಂಖ್ಯಾತರ ಹಕ್ಕುಗಳ ಸುಧಾರಣೆ, ಶಿಕ್ಷಣ ವ್ಯವಸ್ಥೆ ಆಧುನೀಕರಣ, ಜನಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಉದ್ದೇಶವನ್ನೂ ದೊರೆ ಸಲ್ಮಾನ್ ಹೊಂದಿದ್ದಾರೆ

SCROLL FOR NEXT